ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ರಾಷ್ಟ್ರೀಯ ಮಾನ್ಯತೆ ಪಡೆದ( NABH) ಬೆನಕ ಹೆಲ್ತ್ ಸೆಂಟರಿನಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಪ್ರಯುಕ್ತ ದಿನಾಂಕ. 12.05.2023 ರಂದು ತಾಲೂಕಿನ ಹಿರಿಯ ದಾದಿಯಾದ ಶ್ರೀಮತಿ ದೇವಮ್ಮ ಅವರನ್ನು ಗೌರವಿಸುವ ಮೂಲಕ ವಿಶಿಷ್ಟವಾಗಿ ದಾದಿಯರ ದಿನಾಚರಣೆ ಆಚರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾIIಗೋಪಾಲಕೃಷ್ಣ ಮತ್ತು ಡಾII ಭಾರತಿ ದಂಪತಿಗಳು ಶ್ರೀಮತಿ ದೇವಮ್ಮರವರಿಗೆ ಶಾಲು ಹೊದಿಸಿ ಫಲಪುಷ್ಪಗಳನ್ನು ಅರ್ಪಿಸಿ ನೆನಪಿನ ಕಾಣಿಕೆ ನೀಡಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲ ದಾದಿಯರಿಗೆ ದೀಪವನ್ನು ನೀಡಿ ದಾದಿಯರ ದಿನಾಚರಣೆಗೆ ಕಾರಣ ಕರ್ತರಾದ ನೈಟಿಂಗೇಲ್ ಅವರ ಸ್ಮರಣಾರ್ಥ ಸಹಾಯಕ ನರ್ಸಿಂಗ್ ಸುಪರಿಂಟೆಂಡೆಂಟ್ ಸಿಸ್ಟೆರ್ ಶ್ವೇತಾ ಎನ್.ವಿ ಯವರು ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀಮತಿ ದೇವಮ್ಮನವರು ಮಾತನಾಡಿ ದಾದಿಯರ ಕೆಲಸ ಅತ್ಯಂತ ಪವಿತ್ರವಾದದ್ದು ಅದು ದೇವರ ಪೂಜೆಗೆ ಸಮಾನ. ಆಸ್ಪತ್ರೆಯ ಎಲ್ಲ ದಾದಿಯರೂ ಇದನ್ನು ನೆನಪಿನಲ್ಲಿಟ್ಟುಕೊಂಡು ಪ್ರೀತಿಯಿಂದ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಆಶೀರ್ವದಿಸಿದರು. ಡಾII ಗೋಪಾಲಕೃಷ್ಣರವರು ಮಾತನಾಡಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಮತ್ತು ಈಗ ಕೆಲಸ ನಿರ್ವಹಿಸುತ್ತಿರುವ ದಾದಿಯರು ಮತ್ತು ಸಿಬ್ಬಂದಿಗಳಿಂದಾಗಿ ಆಸ್ಪತ್ರೆ ತಾಲೂಕಿನಲ್ಲಿಯೇ ಗುರುತಿಸಲ್ಪಡಲಾಗಿದೆ ಮುಂದೆಯೂ ಇದೇ ರೀತಿ ಸಹಕಾರ, ಕರ್ತವ್ಯ ನಿರ್ವಹಿಸಿ ಇನ್ನಷ್ಟು ಬೆಳೆಯುವಂತಾಗಲಿ ಎಂದು ಎಲ್ಲ ದಾದಿಯರಿಗೂ ಶುಭಾಶಯ ಕೋರಿದರು. ನರ್ಸ್ ಕೆ.ಎನ್ ಸ್ವಾತಿ ಇವರು ದಾದಿಯರ ದಿನಾಚರಣೆಯ ಪ್ರಾರಂಭ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಎಸ್.ಜಿ ಭಟ್ ಇವರು ಸ್ವಾಗತಿಸಿ ನಿರೂಪಣೆಗೈದರು. ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
You Might Also Like
ಮಾದಕ ವಸ್ತು ಮುಕ್ತ ಸಮಾಜಕ್ಕೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ- ಶ್ರೀ ಆಂಜನೇಯ ರೆಡ್ಡಿ–ಕಹಳೆ ನ್ಯೂಸ್
ಪುತ್ತೂರು : ಸಂತ ಫಿಲೋಮಿನಾ ಪ. ಪೂ ಕಾಲೇಜು ವತಿಯಿಂದ ಮಾದಕ ವಸ್ತು ವಿರೋಧಿ ಜಾಗೃತಿ ಉಪನ್ಯಾಸವು ನ.26 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು....
ಸ್ಪಂದನಾ ಅವರಿಂದ ಸೆಂಟ್ ಫಿಲೋಮೀನಾ ಆಟೋನಮಸ್ ಕಾಲೇಜಿಗೆ ಹಿರಿಮೆ: ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ, ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ-ಕಹಳೆ ನ್ಯೂಸ್
ಪುತ್ತೂರು : ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ದ್ವಿತೀಯ ಬಿಎಸ್ಸಿ ಯ ಸ್ಪಂದನ 2024-25 ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ...
ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ ಘಟಕದಿಂದ ಎನ್.ಸಿ.ಸಿ. ದಿನಾಚರಣೆಯ ಪ್ರಯುತ್ತ ರಕ್ತದಾನ ಶಿಬಿರ-ಕಹಳೆ ನ್ಯೂಸ್
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇದರ ಎನ್.ಸಿ.ಸಿ. ಘಟಕಗಳಾದ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ 5 ಕರ್ನಾಟಕ...
ಸ್ವಾತಂತ್ರ್ಯ ಕೇವಲ ಕಥೆಯಲ್ಲ, ಅದೊಂದು ದಂತಕಥೆ: ಡಾ. ಪಿ. ಅನಂತ ಕೃಷ್ಣ ಭಟ್-ಕಹಳೆ ನ್ಯೂಸ್
ಮಂಗಳೂರು : ಸ್ವಾತಂತ್ರ್ಯ ಎಂಬುದು ಕೇವಲ ಕಥೆಯಷ್ಟೇ ಅಲ್ಲ, ಅದೊಂದು ದಂತಕಥೆ ಎಂದು ಕೆನರಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಅನಂತ ಕೃಷ್ಣಭಟ್...