Recent Posts

Monday, January 20, 2025
ಸುದ್ದಿ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ- ಆಪ್ ಸಂಸದ ರಾಘವ್​ ಚಡ್ಡಾ ಅದ್ಧೂರಿ ನಿಶ್ಚಿತಾರ್ಥ –ಕಹಳೆ ನ್ಯೂಸ್

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ  ನಿಶ್ಚಿತಾರ್ಥ ಮಾಡಿಕೊಂಡಿದ್ದು, ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರ ನಿಶ್ಚಿತಾರ್ಥ  ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭವು ಸಿಖ್​ ಸಂಪ್ರದಾಯದಂತೆ ನಡೆದಿದೆ. ಎಂಗೇಜ್​ಮೆಂಟ್​ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ರಾಜಕಾರಣಿಗಳು ಸೇರಿದಂತೆ ಆಪ್ತರಷ್ಟೇ ಪಾಲ್ಗೊಂಡಿದ್ದರು.

ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಕಾರ್ಯಕ್ರಮ ನಡೆಯಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಓಬ್ರೇನ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಸುಮಾರು 150 ಅತಿಥಿಗಳು ಭಾಗಿಯಾಗಿದ್ದರು.

ರಾಘವ್ ಅವರು ಪವನ್ ಸಚ್‌ದೇವ್ ವಿನ್ಯಾಸಗೊಳಿಸಿದ ಅಚ್ಕನ್ ಧರಿಸಿದ್ದರು. ಮೂಲಗಳ ಪ್ರಕಾರ ಖ್ಯಾತ ಡಿಸೈನರ್​ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪನ್ನು ಪರಿಣೀತಿ ಚೋಪ್ರಾ ಧರಿಸಿದ್ದರು. ಕಾರ್ಯಕ್ರಮದಲ್ಲಿ ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ಉಪಸ್ಥಿತರಿದ್ದರು. ಪ್ರಿಯಾಂಕಾ ಚೋಪ್ರಾ ನಿನ್ನೆ ಬೆಳಗ್ಗೆ ತನ್ನ ಸಹೋದರಿಯ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದರು.

ನಿಶ್ಚಿತಾರ್ಥದಲ್ಲಿ ಯಾರೂ ಮೊಬೈಲ್​ ಬಳಸುವಂತಿರಲಿಲ್ಲ. ಹೀಗಾಗಿ ಅಭಿಮಾನಿಗಳು ಪಿಗ್ಗಿ ಫೋಟೋಗಾಗಿ ಕಾಯುತ್ತಿದ್ದರು. ಬಳಿಕ ಈ ಜೋಡಿ ನಿಶ್ಚಿತಾರ್ಥ ಮುಗಿಸಿ ಮನೆಯಿಂದ ಹೊರಗೆ ಬಂದು ಪಾಪ್​ಗಳಿಗೆ ಚಂದನೆಯ ನಗೆ ಬೀರಿದರು. ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಕ್ಯಾಮರಾಗೆ ಕ್ಯೂಟ್​ ಸ್ಮೈಲ್​ ಕೊಟ್ಟರು. ಪ್ರಿಯಾಂಕಾ ಚೋಪ್ರಾ ಮತ್ತು ಕುಟುಂಬದ ಸದಸ್ಯರು ಹೊರಗಡೆ ನಿಂತಿದ್ದ ಪಾಪ್​ಗಳಿಗೆ ಸಿಹಿ ಹಂಚಿದರು.