Friday, September 20, 2024
ಸುದ್ದಿ

ಫೇಮಸ್ ಆಗುವುದಕ್ಕೆ ಗೂಳಿ ಮೇಲೆ ಯುವಕನ ಸವಾರಿ : ಇದೀಗ ಪೊಲೀಸರ ಅತಿಥಿ –ಕಹಳೆ ನ್ಯೂಸ್

ಇದೀಗ ಸೋಷಿಯಲ್ ಯುಗ, ಫೇಮಸ್ ಆಗುವುದಕ್ಕಾಗಿ ಕೆಲ ಯುವಕರು ಇಲ್ಲ ಸಲ್ಲದ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ರೀತಿ ಯುವಕನೊಬ್ಬ ಪ್ರಚಾರಕ್ಕಾಗಿ ಗೂಳಿ ಮೇಲೆ ಸವಾರಿ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹೌದು, ಉತ್ತರಾಖಂಡದ ರಿಷಿಕೇಶದ ತಪೋವನ ಎಂಬ ನಗರದಲ್ಲಿ ಮಧ್ಯರಾತ್ರಿ ಪಾನಮತ್ತನಾಗಿದ್ದ ಯುವಕನೊಬ್ಬ ಗೂಳಿಯೊಂದರ ಮೇಲೇರಿ ಸವಾರಿ ನಡೆಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಜಾಹೀರಾತು


ಅಲ್ಲದೇ, ಪ್ರಾಣಿ ದಯಾ ಸಂಘಗಳಿAದ ಟೀಕೆಗೂ ಗುರಿಯಾಗಿತ್ತು. ಇದರ ಬೆನ್ನಲ್ಲೇ ರಿಷಿಕೇಶ ಪೊಲೀಸರು ಈ ಬಗ್ಗೆ ಕ್ರಮ ಜರುಗಿಸಿದ್ದಾರೆ.

ಯುವಕನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾನೆ. ಮತ್ತೂಮ್ಮೆ ಇಂಥ ದುಸ್ಸಾಹಸಕ್ಕೆ ಕೈಹಾಕದಂತೆ ಯುವಕನಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.