Sunday, January 19, 2025
ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ಕೇವಲ 9 ದಿನಗಳಲ್ಲಿ 100ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿ, ಹೊಸ ದಾಖಲೆ ನಿರ್ಮಿಸಿದ ‘ದಿ ಕೇರಳ ಸ್ಟೋರಿ’ –ಕಹಳೆ ನ್ಯೂಸ್

ವಿವಾದದಿಂದಲೇ ಸುದ್ದಿಯಾಗಿ ಇದೀಗ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ʼದಿ ಕೇರಳ ಸ್ಟೋರಿʼ ಹೊಸ ದಾಖಲೆಯೊಂದನ್ನು ಬರೆದಿದೆ.

ಮೇ. 5 ರಂದು ಗ್ರ‍್ಯಾಂಡ್ ರಿಲೀಸ್ ಆದ ಸುದೀಪ್ತೋ ಸೇನ್ ಅವರ ʼದಿ ಕೇರಳ ಸ್ಟೋರಿʼ ಒಂದಷ್ಟು ವಿವಾದದಿಂದ ಸುದ್ದಿಯಾಗಿತ್ತು. ಕೇರಳದ ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಸೇರಿ ಅಲ್ಲಿಂದ ಐಸಿಸ್ ಸೇರುವ ಕಥೆಯನ್ನು ಚಿತ್ರ ಒಳಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರಂಭದಲ್ಲಿ 32 ಸಾವಿರ ಭಾರತೀಯ ಮಹಿಳೆಯರು ಈ ರೀತಿ ಐಸಿಸ್ ಸೇರಿದ್ದಾರೆ ಎಂದು ಚಿತ್ರತಂಡ ಟೀಸರ್‌ನಲ್ಲಿ ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿ, ಇದು ಸುಳ್ಳ ಎಂದ ಬಳಿಕ ಸಿನಿಮಾ ತಂಡ 32 ಸಾವಿರ ಮಹಿಳೆಯರು ಎನ್ನುವ ದೃಶ್ಯ ಸೇರಿ ಅನೇಕ ದೃಶ್ಯವನ್ನು ತೆಗೆದು ಹಾಕಿತ್ತು.

ಹೀಗೆ ವಿವಾದದಿಂದ ಸುದ್ದಿಯಾದ ಸಿನಿಮಾ ನಿಧಾನವಾಗಿ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದೆ. ಮೇ.13ರಂದು ಸಿನಿಮಾ 19.50 ಕೋಟಿ ರೂ.ವನ್ನು ಗಳಿಸಿದ್ದು, ರಿಲೀಸ್ ಆದ 9 ದಿನದಲ್ಲಿ ಸಿನಿಮಾ ಒಟ್ಟು 112.87 ಕೋಟಿ ರೂ. ಗಳಿಸಿದೆ. ಆ ಮೂಲಕ ಈ ವರ್ಷ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಎರಡನೇ ಸಿನಿಮಾವಾಗಿ ʼದಿ ಕೇರಳ ಸ್ಟೋರಿʼ ಹೊರಹೊಮ್ಮಿದೆ.