Tuesday, December 3, 2024
ದಕ್ಷಿಣ ಕನ್ನಡಬಂಟ್ವಾಳರಾಜಕೀಯರಾಜ್ಯಸುದ್ದಿ

ಚುನಾವಣೆಯಲ್ಲಿ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರುಗಳಿಗೆ ಅಭಿನಂದನೆ ಸಲ್ಲಿಸುವ ಬ್ಯಾನರ್ ನಲ್ಲಿ ಅರುಣ್ ಕುಮಾರ ಪುತ್ತಿಲ..!! ‘ ಸೋಲಿನಲ್ಲೂ ಇತಿಹಾಸ ಕಂಡ ನಮ್ಮೆಲ್ಲರ ನೆಚ್ಚಿನ ನಾಯಕರಾದ ಅರುಣ್ ಕುಮಾರ್ ಪುತ್ತಿಲ’ ರವರಿಗೆ ಅಭಿನಂದನೆಗಳು ಎಂದ ಕುದ್ರೆಬೆಟ್ಟಿನ ನಮೋ ಅಭಿಮಾನಿ ಬಳಗ – ಕಹಳೆ ನ್ಯೂಸ್

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದುತ್ವದಡಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದ ಅರುಣ್ ಕುಮಾರ್ ಪುತ್ತಿಲ ರವರು ಕೊನೆವರೆಗೂ ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದು, ನಾಲ್ಕು ಸಾವಿರ ಮತಗಳ ಅಂತರದಲ್ಲಿ ಪರಾಜಯವನ್ನಪ್ಪಿದ್ದರು. ಈ ವಿಚಾರ ಅವರ ಅಭಿಮಾನಿ ಬಳಗಕ್ಕೆ ತೀವ್ರ ಬೇಸರವನ್ನುಂಟು ಮಾಡಿದೆ. ಆದರೇ ಓರ್ವ ಸಾಮಾನ್ಯ ವ್ಯಕ್ತಿ ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಿ ಕೆಲವೇ ಮತಗಳ ಅಂತರ ಸೋಲನ್ನುನ್ನಭವಿಸಿರುವುದು ಸಾಮಾನ್ಯ ವಿಷಯವಲ್ಲ ಎಂಬುದು ಎಲ್ಲರ ಮಾತಾಗಿದೆ. ಪುತ್ತೂರು ಮಾತ್ರವಲ್ಲದೇ ಹತ್ತೂರಲ್ಲೂ ಪುತ್ತಿಲ ರವರ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ರೀತಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನಲ್ಲೂ ಪುತ್ತಿಲ ಪರ ಬ್ಯಾನರ್ ಅಳವಡಿಸಿದ್ದು, ನಮೋ ಅಭಿಮಾನಿ ಬಳಗದವರು ಈ ಬ್ಯಾನರ್ ಅನ್ನು ಅಳವಡಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯಲ್ಲಿ ವಿಜೇತರಾದವರಿಗೆ ಅಭಿನಂದನೆ ಸಲ್ಲಿಸುವ ಬ್ಯಾನರ್ ನಲ್ಲಿ ಅರುಣ್ ಕುಮಾರ ಪುತ್ತಿಲ ರವರ ಫೋಟೋವನ್ನು ಹಾಕಲಾಗಿದ್ದು, ‘ಸೋಲಿನಲ್ಲೂ ಇತಿಹಾಸ ಕಂಡ ನಮ್ಮೆಲ್ಲರ ನೆಚ್ಚಿನ ನಾಯಕರಾದ ಅರುಣ್ ಕುಮಾರ್ ಪುತ್ತಿಲ’ ರವರಿಗೆ ಅಭಿನಂದನೆಗಳು ಎಂದು ಬರೆದಿದ್ದಾರೆ.