Recent Posts

Monday, January 20, 2025
ಸುದ್ದಿ

ವೀರಕಂಬದ ಯುವಕೇಸರಿ ಫ್ರೆಂಡ್ಸ್(ರಿ) ಅರೆಬೆಟ್ಟು ಎರ್ಮೆಮಜಲ್ ಪ್ರಯೋಜಕತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಯುವಕೇಸರಿ ಫ್ರೆಂಡ್ಸ್ (ರಿ) ಅರೆಬೆಟ್ಟು ಎರ್ಮೆಮಜಲ್ ಇದರ ಪ್ರಯೋಜಕತ್ವದಲ್ಲಿ ನ್ಯೂವ್ ವಿಷನ್ ಜನರೇಶನ್ ಕಾರ್ಯಕ್ರಮದ ಅಂಗವಾಗಿ 2.5 ಎನ್‌ವಿಜಿ ಸುರತ್ಕಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂದತ್ವ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ 14.05.2023 ಆದಿತ್ಯವಾರ ಬೆಳಗ್ಗೆ 10.00 ರಿಂದ ಸಂಜೆ 4.00ರ ವರೆಗೆ ಯುವಕೇಸರಿ ಭವನ ಎರ್ಮೆಮಜಲ್ ಇಲ್ಲಿ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಊರಿನ ಹಿರಿಯರು ಅದ ರತ್ನಾಕಾರ ಭಂಡಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾಕ್ಟರ್ ಹೆಮಚಂದ್ರ, ಸಿವಿಲ್ ಇಂಜಿನಿಯತ್ ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ ಬಾಯಿಲ, ಯುವಕೇಸರಿ ಫ್ರೆಂಡ್ಸ್ (ರಿ)ಇದರ ಅಧ್ಯಕ್ಷರಾದ ಯತೀಶ್, ಸಂಘದ ಸದಸ್ಯರು ಉಪಸ್ಥಿತರಿದ್ದರು. ಸುಮಾರು 150 ಮಂದಿ ಸದುಪಯೋಗ ಪಡೆದುಕೊಂಡರು