Recent Posts

Monday, January 20, 2025
ಸುದ್ದಿ

ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸುಳ್ಯದ ಅನನ್ಯ : ಚಿಕಿತ್ಸಾ ವೆಚ್ಚಕ್ಕಾಗಿ ಕೈಲಾದಷ್ಟು ನೆರವು ನೀಡೋಣ ಬನ್ನಿ.. –ಕಹಳೆ ನ್ಯೂಸ್

ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಗ್ರಾಮದ ವಸಂತ ಬಿನ್ ಮುದರ ಮುಗೇರ ಇವರ ಮಗಳಾದ ೮ ವರ್ಷದ ಕುಮಾರಿ ಅನನ್ಯ ಬಿ ಅನಾರೋಗ್ಯಕ್ಕೆ ತುತ್ತಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಅನನ್ಯಾಗೆ ಬ್ಲಡ್ ಕ್ಯಾನ್ಸರ್ ಕಾಯಿಲೆ ಇರೋದಾಗಿ ತಿಳಿಸಿದ್ದಾರೆ.

ಮಂಗಳೂರಿನ ಕೆ,ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ ೯ ಲಕ್ಷ ಖರ್ಚಾಗಿದ್ದು ಮುಂದಿನ ಚಿಕಿತ್ಸೆಗೆ ಇನ್ನಷ್ಟು ವೆಚ್ಚ ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರತಿ ತಿಂಗಳು ಮಗುವಿನ ಕಿಮೋ ಥೆರೆಪಿ ಮಾಡಲು ಹಣವಿಲ್ಲದೆ ಬಡಕುಟುಂಬ ಕಂಗಾಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅನನ್ಯಳಾ ಚಿಕಿತ್ಸಗೆ ಹಣದ ಅವಶ್ಯಕತೆ ಇದ್ದು ಬಡ ಕುಟುಂಬ ಸಹೃದಯಿದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.
ಉದಾರಿಗಳಾದ ತಾವು ದುಡಿಮೆಯ ಕಿಂಚಿತ್ತು ಪಾಲನ್ನು ನೊಂದ ಈ ಜೀವಕ್ಕೆ ನೀಡಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ..

? Bank : SBI Bank
?️ Branch: SUBRAMANYA
? IFSC Code: SBIN0040951
? Account No: 39689969132

ವಿ.ಸೂ : ಬ್ಯಾಂಕ್ ಖಾತೆಗೆ ಜಮಾ ಮಾಡಿದ ಮಾಹಿತಿಯನ್ನು ನಾಗೇಶ್ ಬೆಳ್ಳಾರೆ 7899495364 ಅವರ ವಾಟ್ಸಪ್ ಗೆ ನೀಡಲು ಕೋರಿಕೆ..