Tuesday, January 21, 2025
ಸುದ್ದಿ

ಅಂಬುಲೆನ್ಸ್ ಗೆ ನೀಡಲು ಹಣವಿಲ್ಲದೆ ಮಗನ ಶವವನ್ನು ಬ್ಯಾಗಿನಲ್ಲಿರಿಸಿ ಬಸ್ ನಲ್ಲಿ ಕೊಂಡೊಯ್ದ ತಂದೆ – ಕಹಳೆ ನ್ಯೂಸ್

ಪಶ್ಚಿಮ ಬಂಗಾಳದಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಮಗನ ಶವವನ್ನು ಆಂಬುಲೆನ್ಸ್ ನಲ್ಲಿ ಸಾಗಿಸಲು ಹಣವಿಲ್ಲದೆ ವ್ಯಕ್ತಿಯೊಬ್ಬ ಮೃತ ದೇಹವನ್ನು ಬ್ಯಾಗಿನಲ್ಲಿರಿಸಿ ಬಸ್ ನಲ್ಲಿ ಕೊಂಡೊಯ್ದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಘಟನೆ ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಕಾಲಿಯಾಗಂಜ್ ನಿವಾಸಿ ಒಬ್ಬರ ಐದು ತಿಂಗಳ ಗಂಡು ಮಗು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಗನ ಚಿಕಿತ್ಸೆಗಾಗಿ ಆಗಲೇ 16 ಸಾವಿರ ರೂಪಾಯಿ ಖರ್ಚು ಮಾಡಿದ್ದ ಆ ವ್ಯಕ್ತಿಗೆ ಸಿಲಿಗುರಿಯಿಂದ 200 ಕಿ.ಮೀ ದೂರವಿರುವ ಕಾಲಿಯಾಗಂಜ್ ಗೆ ಶವವನ್ನು ಕೊಂಡೊಯ್ಯಲು ಆಂಬುಲೆನ್ಸ್ ಚಾಲಕ 8 ಸಾವಿರ ರೂಪಾಯಿ ಕೇಳಿದ್ದ. ಆದರೆ ಅಷ್ಟು ಹಣವಿಲ್ಲದ ಅಶಿಮ್ ದೇಬ್ವರ್ಮ ಎಂಬ ಈ ಬಡ ತಂದೆ ಮಗನ ಶವವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಬಸ್ಸಿನಲ್ಲಿ ಕೊಂಡೊಯ್ದಿದ್ದಾರೆ.