Tuesday, January 21, 2025
ಸುದ್ದಿ

‘ದಿ ಕೇರಳ ಸ್ಟೋರಿ’ ಸಿನೆಮಾ ನಟಿ ಅದಾ ಶರ್ಮಾಗೆ ರಸ್ತೆ ಅಪಘಾತ : ಜೀವ ಬೆದರಿಕೆಯ ಆತಂಕ –ಕಹಳೆ ನ್ಯೂಸ್

‘ದಿ ಕೇರಳ ಸ್ಟೋರಿ’ ಸಿನೆಮಾದ ನಟಿ ಅದಾ ಶರ್ಮಾ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಕಳೆದ ಭಾನುವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಯಾರೂ ಆತಂಕಕ್ಕೆ ಒಳಗಾಗೋದು ಬೇಡ ನಾನು ಆರಾಮಾಗಿದ್ದೇನೆ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಅಭಿಮಾನಿಗಳೇ, ನಾನು ಚೆನ್ನಾಗಿದ್ದೇನೆ. ರಸ್ತೆ ಅಪಘಾತದ ಸುದ್ದಿ ತಿಳಿದು ಸಿಕ್ಕಾಪಟ್ಟೆ ಮೆಸೇಜ್‌ಗಳು ಬರುತ್ತಿವೆ. ನಾನು ಮಾತ್ರವಲ್ಲ, ನನ್ನ ಇಡೀ ತಂಡ ಸುರಕ್ಷಿತವಾಗಿದೆ. ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ. ನಿಮ್ಮ ಕನ್ಸರ್ನ್ಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆ ಅಪಘಾತಕ್ಕೆ ಒಳಗಾಗಿರುವ ಅದಾ ಶರ್ಮಾ, ಜೀವ ಬೆದರಿಕೆ ಎದುರಿಸುತ್ತಿದ್ದಾರೆ ಎಮದು ತಿಳಿದು ಬಂದಿದೆ. ವಿವಾದಿತ ‘ದಿ ಕೇರಳ ಸ್ಟೋರಿ’ಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ಮುಗ್ಧ ಹಿಂದೂ ಮಹಿಳೆಯ ಸುತ್ತ ಸುತ್ತುವ ಕಥೆ ಇದಾಗಿದೆ. ಇಸ್ಲಾಮಿಕ್ ಸ್ನೇಹಿತರಿಂದ ಬ್ರೈನ್ ವಾಶ್ ಆಗಿ ಮತಾಂತರಗೊಳ್ಳುವ ಕಥೆಯನ್ನು ಕೇರಳ ಸ್ಟೋರಿ ಹೊಂದಿದೆ. ಬಳಿಕ ಐಸಿಸ್ ಭಯೋತ್ಪಾದಕ ಸಂಘಟನೆಗೆ ಕಳುಹಿಸಲಾಗುತ್ತದೆ. ಈ ಚಿತ್ರವು ಭಾರೀ ವಿವಾದಕ್ಕೆ ಗುರಿಯಾಗಿದ್ದು, ರಾಜಕೀಯ ಸ್ವರೂಪ ಪಡೆದುಕೊಂಡಿದೆ.