Tuesday, January 21, 2025
ಸುದ್ದಿ

ಮೊಬೈಲ್ ಚಾರ್ಜ್ ಮಾಡೋದು ಬರೀ ಸುಲಭ ಮರ‍್ರೆ..! : ಶೂ ಹಾಕಿ ನಡೆದರೆ ಸಾಕು ತನ್ನಿಂದ ತಾನೇ ಉತ್ಪತ್ತಿಯಾಗುತ್ತೆ ಕರೆಂಟ್ – ಕಹಳೆ ನ್ಯೂಸ್

ಇವಾಗ ಏನೇ ಇದ್ರು ಸ್ಮಾರ್ಟ್ ಫೋನ್ ಯುಗ.. ಕೈನಲ್ಲಿ ಇಂದು ಫೋನ್ ಇದ್ರೆ ಮುಗೀತು ಜಗತ್ತೆ ಕೈನಲ್ಲಿ ಇದ್ದ ಹಾಗೇ.. ಕೆಲವರ ಕೈನಿಂದ ಮೊಬೈಲ್ ಬದಿಗೆ ಸರಿದು ವಿಶ್ರಾಂತಿ ಪಡೆಯೋದು ಅಂದ್ರೆ ಅದು ಮೊಬೈಲ್ ಚಾರ್ಚಿಂಗ್ ಸಮಯದಲ್ಲಿ.. ಮೊಬೈಲ್ ಚಾರ್ಜ್ ಮಾಡ್ತಾನೂ ಕೆಲವರು ಯೂಸ್ ಮಾಡ್ತಾರೆ. ಅದು ಬೇರೇ ವಿಚಾರ ಬಿಡಿ.. ಮನಗೆಲ್ಲ ಗೊತ್ತಿರೋ ಹಾಗೆ ಮೊಬೈಲ್ ಚಾರ್ಜ್ ಆಗ್ಬೇಕಾದ್ರೆ ಕರೆಂಟ್ ಬೇಕು.. ಆದ್ರೆ ಇಲ್ಲೊಬ್ಬ ಯುವಕ ಕರೆಂಟ್ ಇಲ್ಲದೆನೇ ಮೊಬೈಲ್ ಚಾರ್ಚ್ ಮಾಡೋ ಟೆಕ್ನಿಕ್ ಕಂಡು ಹಿಡಿದಿದ್ದಾನೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್‌ನಗರದ ಸೌವಿಕ್ ಸೇಥ್ ಎನ್ನುವ ಬಾಲಕ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಯಸ್ಸು ಸಣ್ಣದಾದ್ರೂ ವಿದ್ಯಾರ್ಥಿ ಕಂಡುಹಿಡಿದಿರೋದು ಮೊಬೈಲ್ ಬಳಕೆದಾರರಿಗೆ ಭಾರೀ ಉಪಯೋಗವಾಗಲಿದೆ. ಶೂಗೆ ಬ್ಯಾಟರಿಯನ್ನು ಜೋಡಿಸಿದ್ದು ಇದಕ್ಕೆ ಚಾರ್ಜಿಂಗ್ ಪ್ಲಗ್ ಮಾಡಿ ಕೈಯಲ್ಲಿ ಮೊಬೈಲ್ ಹಿಡಿದು ನಡೆದುಕೊಂಡು ಹೋಗುತ್ತಿದ್ದರೆ ಸಾಕು ಮೊಬೈಲ್ ಚಾರ್ಜ್ ಆಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಯಾವುದೇ ಚಾರ್ಜಿಂಗ್ ಮೊದಲೇ ಮಾಡೋದು ಬೇಕಾಗಿಲ್ಲ. ಶೂ ಹಾಕಿಕೊಂಡು ನಡೆದರೆ ಸಾಕು ತನ್ನಿಂದ ತಾನೇ ಕರೆಂಟ್ ಉತ್ಪಾದಿಸಿಕೊಂಡು ಮೊಬೈಲ್‌ಗೆ ಚಾರ್ಜ್ ಮಾಡುತ್ತದೆ. ನಡೆದಾಗ ಸ್ಟೋರ್ ಆದಂತಹ ವಿದ್ಯುತ್‌ನಿಂದ ಶೂ ಬಿಚ್ಚಿದಾಗಲೂ ಮೊಬೈಲ್ ಚಾರ್ಜ್ ಮಾಡಬಹುದು. ಶೂಗಳು ಕಳೆಯದಂತೆ ಜಿಪಿಎಸ್ ಟ್ರ‍್ಯಾಕಿಂಗ್ ಮತ್ತು ಕ್ಯಾಮೆರಾವನ್ನು ಶೂಗಳಿಗೆ ಅಳವಡಿಸಲಾಗಿದೆ.

ಸೌವಿಕ್ ಸೇಥ್‌ನ ಐಡಿಯಾದಿಂದ ಆತನ ತಂದೆ-ತಾಯಿ ಖುಸಿಯಾಗಿದ್ದು, ಇನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆಯಿದೆ. ಮಗನ ಸ್ಕಿಲ್ ನೋಡಿದರೆ ಆಶ್ಚರ್ಯವಾಯಿತು. ಅವನು ಮಾಡಿದ್ದು ಎಲ್ಲರಿಗೂ ಉಪಯೋಗ ಆಗಲಿದೆ. ಆದಷ್ಟು ಬೇಗ ಮಾರ್ಕೆಟ್‌ಗೆ ತರಲು ಯೋಚಿಸಲಾಗುವುದು ಎಂದು ಹೇಳ್ತಿದ್ದಾರೆ.