Recent Posts

Sunday, January 19, 2025
ಸುದ್ದಿ

ಕಳೆದು ಹೋದ ಬ್ಯಾಗ್, ಪ್ರಾಮಾಣಿಕವಾಗಿ ಹಿಂದುರಿಗಿಸಿದ ಮಹಮ್ಮದ್ ಆಲಿ – ಕಹಳೆ ನ್ಯೂಸ್

ಮಂಗಳೂರು: ಸಿಕ್ಕ ಬಂಗಾರವನ್ನು ಜೇಬಿಗೆ ತುಂಬಿಕೊಳ್ಳುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಬ್ಯಾಗ್ ಒಂದನ್ನು ಹೆಕ್ಕಿ ಅದರಲ್ಲಿದ್ದ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಸ್ತೆಯ ಬದಿಯಲ್ಲಿ ಇದ್ದ ಬ್ಯಾಗ್‌ನ್ನು ಹೆಕ್ಕಿದ 38 ವರ್ಷ ಪ್ರಾಯದ ಚಾರ್ಮಾಡಿಯ ನಿವಾಸಿ ಶ್ರೀ ಬಿ. ಮಹಮ್ಮದ್ ಆಲಿಯು ಪೊಲೀಸರಿಗೆ ತಂದು ಕೊಟ್ಟಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬ್ಯಾಗ್ ನಲ್ಲಿ ಸುಮಾರು 3,20,000 ಬೆಲೆ ಬಾಳುವ 105 ಗ್ರಾಂ ಚಿನ್ನಾಭರಣ, ಒಂದು ಮೊಬೈಲ್ ಫೋನ್ ಇದ್ದು ಈ ಬ್ಯಾಗ್ ಬಗ್ಗೆ ವಿಚಾರಣೆ ನಡೆಸಿದಾಗ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬೈಂದೂರು ಕೋನೂರು ಪಡುವರಿ ಗ್ರಾಮದ ನಿವಾಸಿ ಶ್ರೀಮತಿ ಪ್ರೇಮ ಎಂಬುವವರು ತನ್ನ ಕುಟುಂಬಸ್ಥರೊಂದಿಗೆ ತಿರುಪತಿ ದರ್ಶನ ಮಾಡಿ ಬೆಂಗಳೂರಿನಿಂದ ಉಡುಪಿಗೆ ರೇಷ್ಮಾ ಖಾಸಗಿ ಬಸ್‌ನಲ್ಲಿ ದಿನಾಂಕ 24.9.18 ರಂದು ರಾತ್ರಿ ಪ್ರಯಾಣೆಸುವಾಗ ಬೆಳಿಗ್ಗೆ 4.30 ಕ್ಕೆ ಬ್ಯಾಗ್ ಚೆಕ್ ಮಾಡಿದಾಗ ಕಾಣೆಸಿರುವುದಿಲ್ಲ ನಂತರ ಬಸ್ ನಿರ್ವಾಹಕರಿಗೆ ತಿಳಿಸಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಚೆಕ್ ಮಾಡಿದ್ದರು ಬ್ಯಾಗ್ ಸಿಕ್ಕಿರುವುದಿಲ್ಲ.

ಬ್ಯಾಗ್‌ನಲ್ಲಿದ್ದ ಮಾಹಿತಿಯ ಆಧಾರದ ಮೇಲೆ ಪೊಲೀಸರು ವಾರಸುದಾರರಾದ ಶ್ರೀ ರಾಮಚಂದ್ರ ದೇವಾಡಿಗರವರಿಗೆ ಒಪ್ಪಿಸಿರುತ್ತದೆ. ಬೆಲೆಬಾಳುವ ಚಿನ್ನಾಭರಣ ಉಳ್ಳ ಬ್ಯಾಗ್‌ನ್ನು ಹಿಂದಿರುಗಿಸಿದ ಚಾರ್ಮಾಡಿ ಗ್ರಾಮದ ಬಿ. ಮಹಮ್ಮದ್ ಆಲಿಯವರಿಗೆ ಪೊಲೀಸ್ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.