ವಿಟ್ಲದ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ: ಗಾಯಳುವಿನಿಂದ ಮಾಹಿತಿ ಪಡೆದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ -ಕಹಳೆ ನ್ಯೂಸ್
ವಿಟ್ಲ : ವ್ಯಕ್ತಿಯೋರ್ವರು ತಂಡದೊoದಿಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಟ್ಲದ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಯೋರ್ವರು ವಿಟ್ಲದ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ.
ಕಡಂಬುವಿನಲ್ಲಿರುವ ಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಸದಾನಂದ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ.
ವಿಟ್ಲದ ಮೇಗಿನಪೇಟೆಯಲ್ಲಿ ಸದಾನಂದರವರು ಕಮರ್ಷಿಯಲ್ ಗ್ಯಾಸ್ ಅನ್ನು ಅಂಗಡಿಗಳಿಗೆ
ಕೊoಡೊಯ್ಯುತ್ತಿದ್ದ ವೇಳೆ ಮೇಗಿನಪೇಟೆಯ ಕೋಳಿ ಅಂಗಡಿಯ ಮಾಲಕನೋರ್ವ ಗ್ಯಾಸ್ ಸಪ್ಲೈ ವಿಚಾರಕ್ಕೆ ಸಂಬAಧಿಸಿ ಸದಾನಂದರೊAದಿಗೆ ಮಾತಿಗಿಳಿದು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ತಂಡದೊoದಿಗೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಸದಾನಂದರವರು ಆರೋಪಿಸಿದ್ದಾರೆ.
ಹಲ್ಲೆಗೊಳಗಾಗಿ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಸದಾನಂದ ರವರನ್ನು ಭೇಟಿಯಾದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಗಾಯಳುವಿನಿಂದ ಮಾಹಿತಿ ಪಡೆದು, ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬoಧಿಸಿದoತೆ ಅಂಗಡಿ ಮಾಲಕ ಅಬ್ದುಲ್ ಸಮದ್ ರವರು ದೂರು ನೀಡಿದ್ದು,
ನಮ್ಮ ಅಂಗಡಿಗೆ ಇಂಡಿಯನ್ ಗ್ಯಾಸ್ ಸಂಸ್ಥೆಯಲ್ಲಿ ಕಳೆದ ಒಂದು ವಾರದ ಹಿಂದೆ ಅನಿಲ ಪೂರೈಕೆ ಮಾಡಲು ತಿಳಿಸಿದ್ದು, ಪೂರೈಕೆ ಮಾಡಿರುವುದಿಲ್ಲ. ಈ ಬಗ್ಗೆ ಫೋನ್ ಮಾಡಿ ವಿಚಾರಿಸಿದಾಗ ಅದರ ಸಿಬ್ಬಂದಿ ಉಡಾಫೆಯಿಂದ ಮಾತನಾಡಿ, ನಿಂದಿಸಿರುತ್ತಾರೆ.
ಮೆ.15ರಂದು ಬೆಳಿಗ್ಗೆ ಅದರ ಚಾಲಕ ಏಕಾಏಕಿ ಪಿಕಪ್ ವಾಹನವನ್ನು ಅಂಗಡಿ ಜಗಳಿಗೆ ನುಗ್ಗಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಸಮದ್ ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ನೀಡಿದ ವೇಳೆ ಅಬ್ದುಲ್ ಸಮದ್ ರವರು ಘಟನೆ ವೇಳೆ ತಮ್ಮಗಡಿಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವಳಿಯ ಫೂಟೇಜ್ ಅನ್ನು ಪೊಲೀಸರಿಗೆ ನೀಡಿದ್ದಾರೆ. ಇತ್ತಂಡಗಳವರು ನೀಡಿದ ದೂರನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.