Friday, January 24, 2025
ಸುದ್ದಿ

‘ಯುದ್ಧಕಾಂಡ’ ಕ್ಕೆ ಎಂಟ್ರಿ ಕೊಟ್ಟ ಅರ್ಚನಾ ಜೋಯಿಸ್ –ಕಹಳೆ ನ್ಯೂಸ್

ಅಜೇಯ್ ರಾವ್ ನಾಯಕರಾಗಿರುವ “ಯುದ್ಧಕಾಂಡ’ ಚಿತ್ರ ತಂಡಕ್ಕೆ ಅರ್ಚನಾ ಜೋಯಿಸ್ ಸೇರಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

“ಕೆಜಿಎಫ್’ ಸಿನಿಮಾದ ತಾಯಿ ಪಾತ್ರದ ಮೂಲಕ ಬೆಳಕಿಗೆ ಬಂದ ಅರ್ಚನಾಗೆ “ಯುದ್ಧಕಾಂಡ’ದಲ್ಲಿ ಪ್ರಮುಖ ಪಾತ್ರವಿದೆಯಂತೆ. ಈ ಹಿಂದೆ “ಕಟಿಂಗ್ ಶಾಪ್’ ಸಿನಿಮಾವನ್ನು ನಿರ್ದೇಶಿಸಿದ್ದ ಪವನ್ ಭಟ್ “ಯುದ್ಧಕಾಂಡ’ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

“ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು “ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣವಾಗುತ್ತಿರುವ “ಯುದ್ಧಕಾಂಡ’ ಸಿನಿಮಾಕ್ಕೆ ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಕೆ. ಬಿ. ಪ್ರವೀಣ್ ಸಂಗೀತ ನಿರ್ದೇಶನವಿದೆವಿನ್ನೂ ಈಬಗ್ಗೆ ಚಿತ್ರದ ನಾಯಕ ನಟ ಅಜೇಯ್ ರಾವ್ ಮಾತಾನಾಡಿ, “ಯುದ್ಧಕಾಂಡ’ ಎಂದಾಗ ಎಲ್ಲರಿಗೂ ರವಿಚಂದ್ರನ್ ಅವರ ಸಿನಿಮಾ ನೆನಪಾಗುತ್ತಿದ್ದು, ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಅವರ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ.

ಈ ಸಿನಿಮಾ ಲಾಂಚ್ ಮಾಡೋವ ಮೊದಲು ರವಿಚಂದ್ರನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಹಾಗಂತ, ಆಗ ಬಂದ “ಯುದ್ಧಕಾಂಡ’ಕ್ಕೂ ಈಗ ಬರುತ್ತಿರುವ “ಯುದ್ಧಕಾಂಡ’ ಸಿನಿಮಾಕ್ಕೂ ಯಾವುದೇ ಸಂಬoಧ ಇಲ್ಲ. ಇದು ಯಾವುದೇ ಸಿನಿಮಾದ ರಿಮೇಕ್ ಕೂಡ ಅಲ್ಲ’ ಎಂದು ಹೇಳಿಕೊಂಡಿದ್ದಾರೆ.