Friday, January 24, 2025
ಸುದ್ದಿ

ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮಿಂಚಿದ ಪುತ್ತೂರಿನ ಪ್ರಮಥ ಎಮ್ ಭಟ್ – ಕಹಳೆ ನ್ಯೂಸ್

ಕೇರಳದ ತ್ರಿಶೂರ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ Institute of Karate and Martial Arts ಪುತ್ತೂರು ಶಾಖೆಯ ಪ್ರಮಥ ಎಮ್ ಭಟ್ ಇವರು ಕುಮಿಟೆಯಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಸಂಸ್ಥೆಯ ಮುಖ್ಯ ಶಿಕ್ಷಕ ನಿತಿನ್ ಎನ್ ಸುವರ್ಣ ಇವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಶಿವಪ್ರಸಾದ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ,ವಿವೇಕ ನಗರ ತೆಂಕಿಲ ಪುತ್ತೂರು ಇಲ್ಲಿನ ಹತ್ತನೇ ತರಗತಿಯ ವಿದ್ಯಾರ್ಥಿ. ಮೈತ್ರಿ ಎಲೆಕ್ಟ್ರಿಕ್ ಕಂ. ಯ ಮಾಲಕರಾದ ರವಿನಾರಾಯಣ ಯಮ್ ಮತ್ತು ಶರಾವತಿ ರವಿನಾರಾಯಣ ಇವರ ಪುತ್ರ. ಕಿರಿಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಇವರು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಿ ವಿದ್ಯಾ ಸಂಸ್ಥೆಗಳಿಗೆ ಹಾಗೂ ಹೆತ್ತವರಿಗೆ ಕೀರ್ತಿ ತರುವಂತಾಗಲಿ ಎಂದು ಶಾಲಾ ಮುಖ್ಯೋಪಾಧ್ಯಾಯರು ಹಾರೈಸಿರುತ್ತಾರೆ.