Thursday, January 23, 2025
ಸುದ್ದಿ

ಲೋಕದ ಸುಭಿಕ್ಷೆಗಾಗಿ ನೆಟ್ಲ ಶ್ರೀನಿಟಿಲೇಶ್ವರ ದೇವಸ್ಥಾನದಲ್ಲಿ ನೆರವೇರಿದ ಬೋಂಡಾಭಿಷೇಕ –ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ವಿಟ್ಲ ಇದರ ಸ್ವಸಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯ ಹಾಗೂ ಯೋಜನೆಯ ವಿಪತ್ತು ನಿರ್ವಹಣಾ ಶೌರ್ಯ ತಂಡ, ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆ ನವ ಜೀವನ ಸಮಿತಿ,ಇವುಗಳ ಜಂಟಿ ಆಶ್ರಯದಲ್ಲಿ ದಿನಾಂಕ-೧೭-೦೫-೨೦೨೩ ನೇ ಬುಧವಾರ ಬಂಟ್ವಾಳ ತಾಲೂಕಿನ ಕಲ್ಲಡ್ಕ ಗೋಳ್ತಮಜಲು ಗ್ರಾಮದ ನೆಟ್ಲ ಶ್ರೀ ನಿಟಿಲೇಶ್ವರ ದೇವಸ್ಥಾನ ದಲ್ಲಿ ಶ್ರೀ ದೇವರಿಗೆ ಈ ವರ್ಷ ಉತ್ತಮ ಮಳೆ ಬಂದು ಯಾವುದೇ ಅನಾಹುತ ಆಗದೇ ನಮ್ಮ ಇಡೀ ಗ್ರಾಮ ಸೀಮೆಗೆ ಸುಭಿಕ್ಷೆ ಸಿಗಲಿ ಸರ್ವೇ ಜನ ಸುಖಿನೋ ಭವಂತು ಎಂಬ ಆಶಯದೊಂದಿಗೆ ಶ್ರೀ ದೇವರಿಗೆ ಬೋಂಡಾಭಿಷೇಕ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೋಂಡಾಭಿಷೇಕದ ನಂತರ ಅನ್ನ ಪ್ರಸಾದ ನೆರವೇರಿತು. ಕಾರ್ಯಕ್ರಮದಲ್ಲಿ ಜನ ಜಾಗೃತಿ ವೇದಿಕೆಯ ಕಲ್ಲಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ, ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣಶೆಟ್ಟಿ, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾದವ ಸಾಲಿಯನ್ ಕುದ್ರೆಬೆಟ್ಟು, ಕಲ್ಲಡ್ಕ ವಲಯಕ್ಕೆ ಸಂಬAಧಪಟ್ಟ ಒಕ್ಕೂಟಗಳ ಅಧ್ಯಕ್ಷರುಗಳಾದ ಸೀತಾರಾಮ್ ಶೆಟ್ಟಿ, ಶಾಂಭವಿ, ಸೀತಾ, ದಯಾನಂದ, ಒಕ್ಕೂಟಗಳ ಸೇವಾ ಪ್ರತಿನಿಧಿಗಳು, ಯೋಜನೆಯ ಸ್ವಸಹಾಯ ಗುಂಪಿನ ಸದಸ್ಯರುಗಳು, ಜನಜಾಗೃತಿ ವೇದಿಕೆಯ ಸದಸ್ಯರುಗಳು, ಶೌರ್ಯ ವಿಪತ್ತು ತಂಡದ ಸದಸ್ಯರುಗಳು, ಭಗವದ್ಭಕ್ತರುಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ. ಶ್ರೀ ನಿಟೀಲಕ್ಷ ಸದಾಶಿವ ದೇವರ ಕೃಪೆಗೆ ಪಾತ್ರರಾದರು.ಸುಮಾರು ೧೫೦೦ ಸೀಯಾಳ ಅಭಿಷೇಕ ಮಾಡಲಾಯಿತು.