Thursday, January 23, 2025
ಸುದ್ದಿ

ಮೂರನೇ ಪತ್ನಿಯ ಸಂತೋಷಕ್ಕಾಗಿ ತನ್ನ 7 ವರ್ಷದ ಮಗನನ್ನು ಕತ್ತು ಹಿಸುಕಿ ಕೊಲೆಗೈದ ತಂದೆ –ಕಹಳೆ ನ್ಯೂಸ್

ತಂದೆಯೊಬ್ಬ ತನ್ನ 7 ವರ್ಷದ ಮಗನನ್ನು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ ನಲ್ಲಿ ನಡೆದಿರುವುದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತೀಕ್ ಮೃತ ಬಾಲಕ. ಯಾವಗಲೂ ತನ್ನ ಅಜ್ಜ – ಅಜ್ಜಿಯೊಂದಿಗೆ ಮಲಗುತ್ತಿದ್ದ ಪ್ರತೀಕ್ ಗೆ ಭಾನುವಾರ( ಮೇ.14 ರಂದು) ಅಪ್ಪ ಶಶಿಪಾಲ್ ಮುಂಡೆ (26) ಕೂಲರ್‌ ಇದೆ ನನ್ನ ರೂಮ್‌ ಅಲ್ಲಿ ಮಲಗು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪ್ಪನ ಮಾತಿಗೆ ಖುಷಿಯಿಂದ ಆಯಿತೆಂದು ಪ್ರತೀಕ್ ರೂಮ್‌ ಗೆ ತೆರಳಿದ್ದಾನೆ. ಮಗ ಮಲಗಿದ ಬಳಿಕ ಟಿವಿಯ ವಾಲ್ಯೂಮ್‌ ನ್ನು ಜಾಸ್ತಿ ಮಾಡಿ, ಮಗನ ಕತ್ತು ಹಿಸುಕಿ ಕೊಲೆಗೈದಿದ್ದಾನೆ.

ಮಗನನ್ನು ಹತ್ಯೆ ಮಾಡಿದ ಬಳಿಕ ತನ್ನ ಮೂರನೇ ಪತ್ನಿ ಪಾಯಲ್‌ ಗೆ ವಿಡಿಯೋ ಕಾಲ್‌ ಮಾಡಿದ್ದಾನೆ. ಆ ಬಳಿಕ ವಿಡಿಯೋವನ್ನು ಪತ್ನಿಗೆ ಕಳುಹಿಸಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಶಶಿಪಾಲ್‌ ಹಾಗೂ ಆತನ ಮೂರನೇ ಪತ್ನಿ ಪಾಯಲ್‌ ನ್ನು ಪೊಲೀಸರು ಬಂಧಿಸಿದ್ದಾರೆ.

ಮೂರನೇ ಪತ್ನಿಯಾಗಿರುವ ಪಾಯಲ್‌ ಗೆ ಪ್ರತೀಕ್‌ ನನ್ನು ನೋಡಿದರೆ ಆಗುತ್ತಿರಲಿಲ್ಲ. ಇದೇ ಕಾರಣದಿಂದ ಒಂದು ನಾನು ಇರಬೇಕು ಇಲ್ಲದಿದ್ರೆ ಆತನನ್ನು ನೀನು ಸಾಯಿಸಬೇಕೆಂದು ಹೇಳಿ ತನ್ನ ಪುಟ್ಟ ಮಗುವಿನೊಂದಿಗೆ ಗಂಡನ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮಗನನ್ನು ಪ್ಲ್ಯಾನ್‌ ಮಾಡಿ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಾನು ಮಗನನ್ನು ಕೊಂದಿದ್ದೇನೆ. ಈಗ ನಿನಗೆ ಯಾರೂ ತೊಂದರೆ ಕೊಡಲ್ಲ ಎಂದು ಹೇಳುವ ವಿಡಿಯೋ ಶಶಿಪಾಲ್‌ ಮೊಬೈಲ್‌ ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತನಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಾಯಲ್ ಹೇಳಿದ್ದಾರೆ. ನನ್ನ ಪತಿಗೆ ತನ್ನ ಏಳು ವರ್ಷದ ಮಗನನ್ನು ಸಾಯಿಸುವಂತೆ ನಾನು ಯಾವತ್ತೂ ಹೇಳಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದಾಳೆ.