Thursday, January 23, 2025
ಸುದ್ದಿ

“ಕಾಂಗ್ರೆಸ್ ನ ಸರಣಿ ಕೊಲೆಯ ಟ್ರೇಲರ್ ಕಾಂಗ್ರೆಸ್ ಆಡಳಿತದ ಕಾರ್ಯವೈಖರಿಯ ಸೂಚನೆಯೇ ಇದು..?” : ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ವಿಭಾಗ ಸಂಚಾಲಕ್ ಶ್ರೀನಿಧಿ ಹೆಗ್ಡೆ ಪ್ರಶ್ನೆ –ಕಹಳೆ ನ್ಯೂಸ್

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ಸೂಚನೆ ದೊರಕುತ್ತಿದಂತೆ ಮತಾಂಧ ಜಿಹಾದಿಗಳು ಮತ್ತು ಕಾಂಗ್ರೆಸ್ ಕೃಪಾಕಟಾಕ್ಷ ಹೊಂದಿರುವ ಬೆಂಬಲಿಗರು ತಮ್ಮ ರಾಕ್ಷಸಿ ನಡೆ ಆರಂಭಿಸಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆಯಬಹುದಾದ ದುಷ್ಕೃತ್ಯಗಳ ಸರಮಾಲೆಯ ಟ್ರೇಲರ್ ಇದಾಗಿದ್ದು ಇನ್ನೆಷ್ಟು ಸರಣಿ ಕೊಲೆಗಳು ನಡೆಯುವ ಆತಂಕ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮತ ಎಣಿಕೆ ಕಾರ್ಯ ಮುಕ್ತಾಯವಾಗುತ್ತಿದ್ದಂತೆ ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ ಆಗಿದೆ. ಯಾದಗಿರಿಯಲ್ಲೂ ದ್ವೇಷಕ್ಕೆ ಬಿಜೆಪಿ ಕಾರ್ಯಕರ್ತ ಬಲಿಯಾಗಿದ್ದಾನೆ. ಹೊನ್ನಾವರದಲ್ಲಿ ಪ್ರಚಾರಕ್ಕೆ ಬಿಜೆಪಿ ಅಭ್ಯರ್ಥಿಗೆ ವಾಹನ ನೀಡಿದ್ದಕ್ಕೆ ಕಾಂಗ್ರೆಸ್ ಪಕ್ಷದ ವಿಜಯೋತ್ಸವದ ಸಂದರ್ಭ ವಾಹನಕ್ಕೆ ಕಾಂಗ್ರೆಸ್ ಬೆಂಬಲಿಗರು ಬೆಂಕಿ ಹಚ್ಚಿ ರಾಕ್ಷಸೀಯ ಕೃತ್ಯ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೆಲ್ಲ ಕಾಂಗ್ರೆಸ್ಸ್ ಪಕ್ಷದ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ., ಈವರೆಗೆ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಈ ಹತ್ಯೆಗಳನ್ನು ವಿರೋಧಿಸದೆ ಇರುವುದು ಇವರ ವೋಟ್ ಬ್ಯಾಂಕ್ ರಾಜಕಾರಣ ಕಾರಣಕ್ಕಾಗಿ ಎಂಬುದು ಸ್ಪಷ್ಟವಾಗಿದೆ.

ದ್ವೇಷ ಬಿಟ್ಟು ಪ್ರೀತಿಗೆ ಜನ ಮತ ಹಾಕಿದ್ದಾರೆ ಎಂದು ಹೇಳುವ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಉಂಟಾಗಿರುವ ಹತ್ಯೆಗಳ ಬಗ್ಗೆ ಏಕೆ ಮೌನವಾಗಿದ್ದಾರೆ? ಇಂತಹ ದ್ವೇಷ ರಾಜಕಾರಣವನ್ನು ನಿಲ್ಲಿಸಬೇಕು. ಸರಣಿ ಹತ್ಯೆಯ ಕೃತ್ಯವನ್ನು ಬೆಂಬಲಿಸಿದ್ದೇ ಆದರೆ ಮುಂದೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ.