Thursday, January 23, 2025
ಸುದ್ದಿ

ಶ್ರೀ ಶಂಕರ ಜಯಂತಿ ಉತ್ಸವ 2023 ಸಮಾರೋಪ ಸಮಾರಂಭದ ಸುದ್ದಿಗೋಷ್ಠಿ : ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನಮ್,ಶ್ರೀ ಶೃಂಗೇರಿ ಶಂಕರ ಮಠ ಕೋಟೆಕಾರ್ ಮತ್ತು ಶ್ರೀ ಶಂಕರ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು, ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ಘಟಕದ ವತಿಯಿಂದ ಶ್ರೀ ಶಂಕರ ಜಯಂತಿ ಉತ್ಸವ 2023 ಸಮಾರೋಪ ಸಮಾರಂಭ ಬಂಟ್ವಾಳದ ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮೇ.21 ರಂದು ಭಾನುವಾರ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಮಂಚಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಿಗ್ಗೆ ಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.

ಬೆಳಿಗ್ಗೆ 11 ರಿಂದ ಶ್ರೀ ಶಂಕರ ಜಯಂತಿ 2023 ರ ಸಮಾರೋಪ ಕಾರ್ಯಕ್ರಮ ನಡೆದರೆ ಅ ಬಳಿಕ ಶ್ರೀ ಶಂಕರರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಸಮಾರೋಪದ ಬಳಿಕ ಮಧ್ಯಾಹ್ನ “ಸುಧನ್ವಾರ್ಜುನ ” ತಾಳಮದ್ದಳೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವೀಂದ್ರ ಕುಕ್ಕಾಜೆ, ರಾಜಾರಾಮ ಐತಾಳ ಕಂದೂರು, ಅನಾರು ಕೃಷ್ಣ ಶರ್ಮ, ಶಿವರಾಮ ರಾವ್ ಬೈರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.