ದೇಶವ್ಯಾಪಿ ಸಂಚಲನ ಸೃಷ್ಟಿಸಿರುವ ‘ದಿ ಕೇರಳ ಸ್ಟೋರಿ’ ಚಿತ್ರತಂಡ ಮತಾಂತರ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿದೆ. ”ದಿ ಕೇರಳ ಸ್ಟೋರಿ” ತಂಡವು 26 ಮಂದಿ ಮತಾಂತರದ ಸಂತ್ರಸ್ತರೊದಿಗೆ ವೇದಿಕೆ ಹಂಚಿಕೊoಡು, ಈ ಸಂದರ್ಭದಲ್ಲಿ ಮಹತ್ತರ ವಿಚಾರವನ್ನ ಸಿನಿಮಾದ ನಿರ್ಮಾಪಕ ವಿಪುಲ್ ಶಾ ಘೋಷಣೆ ಮಾಡಿದ್ದಾರೆ.
ಮತಾಂತರದ ಸಂತ್ರಸ್ತರನ್ನು ಬೆಂಬಲಿಸುವ ಗುರಿಯೊಂದಿಗೆ ನಾವು ಚಲನಚಿತ್ರವನ್ನು ನಿರ್ಮಿಸಿದ್ದೇವೆ. ನಮ್ಮ ಉಪಕ್ರಮ ‘ಹೆಣ್ಣುಮಕ್ಕಳನ್ನು ರಕ್ಷಿಸಿ’ ಅದೇ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಶಾ ಹೇಳಿದ್ದಾರೆ.
”ಸಂತ್ರಸ್ತ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವುದು ನಾವು ಕೇರಳ ಸ್ಟೋರಿ ಸಿನಿಮಾ ಮಾಡಲು ಮುಖ್ಯ ಕಾರಣ. ಈ ಕಾರ್ಯವನ್ನು ನಾವು ಆಶ್ರಮದಲ್ಲಿ 300 ಹುಡುಗಿಯರ ಪುನರ್ವಸತಿಗೆ ಸಹಾಯ ಮಾಡುವ ಮೂಲಕ ಪ್ರಾರಂಭಿಸಲಿದ್ದೇವೆ. ಸನ್‌ಶೈನ್ ಪಿಕ್ಚರ್ಸ್ ಮತ್ತು ‘ದಿ ಕೇರಳ ಸ್ಟೋರಿ’ ತಂಡವು 51 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವ ಮೂಲಕ ಕಾರ್ಯ ಪ್ರಾರಂಭಿಸಲು ಬಯಸುತ್ತೇವೆ” ಎಂದು ನಿರ್ಮಾಪಕರು ತಿಳಿಸಿದ್ದಾರೆ.