Monday, January 20, 2025
ಸುದ್ದಿ

ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಕಹಳೆ ನ್ಯೂಸ್

ಬಂಟ್ವಾಳ: ನೇತ್ರಾವತಿ ನದಿಗೆ ವ್ಯಕ್ತಿಯೋರ್ವ ಹಾರಿದ ಘಟನೆ ವರದಿಯಾಗಿದ್ದು, ಈತನಿಗಾಗಿ ಸ್ಥಳೀಯ ಮುಳುಗು ತಜ್ಞರು ಹುಡುಕವ ಪ್ರಯತ್ನ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೆಟ್ಲ ನಿವಾಸಿ ವಿವಾಹಿತ ಪ್ರವೀಣ್ ನೆಟ್ಲ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಮ್ಯಾಕನಿಕ್ ಕೆಲಸ ಮಾಡುತ್ತಿದ್ದ ಈತ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹೋಗದ ತಿರುಗಾಡುತ್ತಿದ್ದ ಎನ್ನಲಾಗಿದ್ದು, ಹಾರುವ ಕೆಲ ಗಂಟೆಗಳ ಮೊದಲು ವ್ಯಾಟ್ಸ್ ಆಪ್ ಗ್ರೂಪ್ ನಲ್ಲಿ ಸಾಯುತ್ತೆನೆಂದು ಮೆಸೇಜ್ ಕೂಡ ಮಾಡಿದ್ದಾನೆ ಎಂದು ಹೇಳಲಾಗಿದೆ.
ಬೈಕಿನಲ್ಲಿ ಬಂದ ಈತ ನೇತ್ರಾವತಿ ಹೊಸ ಸೇತುವೆ ಮೇಲೆ ಬೈಕ್ ನಿಲ್ಲಿಸಿ ಚಪ್ಪಲಿ ಅಲ್ಲೆ ಇಟ್ಟು ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.

ಇದೀಗ ಈತನಿಗಾಗಿ ಮುಳುಗುತಜ್ಞರು ನೀರಿನಲ್ಲಿ ಹುಡುಕುತ್ತಿದ್ದು,ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.