Friday, September 20, 2024
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ -೧

” ಶ್ರೀ ಅಭಯ ಗಣಪತಿ “

ಕಲ್ಲರಳಿ ಹೂವಾಯ್ತು ಶಿಲೆಯ ರೂಪವ ಕಳೆದು l
ಕರಿಶಿಲೆಯ ವರವಾಯ್ತು ಕಲೆಯ ರೂಪವ ತಳೆದು l
ಹೇರಂಭಾ ವರವರದ ಕರುಣಾನಿಧಿ ಹೃದಯ l
ಶರಣಾದ ಭಕುತರಿಗೆ ನೀ ದಯಾಮಾಡಿ ಅಭಯ ll೧ll

ಸಮೃದ್ಧಿ ನೀನೀವೆ ಹೇ ವಿದ್ಯಾಗಣಪತಿಯೆ l
ಅಭಯವೀಯುತ ಕಾವೆ ಹೇ ಸಿದ್ಧಿವಿನಾಯಕನೆ l
ಪೊರೆಯುವ ದೇವನೆ ಜಗದಾದಿ ಮೂರುತಿಯೆ l
ವಿಶ್ವವೆಲ್ಲವು ನುತಿಸುವ ಮಹಾಗಣಪತಿಯೆ ll೨ll

ಜಾಹೀರಾತು
ಜಾಹೀರಾತು
ಜಾಹೀರಾತು

ಶರಣುಶರಣು ಏಕದಂತ ಬಲುವಿಧ ಗುಣರೂಪ l
ಗಣಗಳಿಗೊಡೆಯನೆ ಪೊರೆ ನೀ ಮೃಢನ ಸುತ್ತ l
ಪಾಶಾಂಕುಶಧರ ಪಾರ್ವತಿನಂದನ ಮೂಷಿಕವಾಹನ ವಿನಾಯಕ l
ಲಂಬೋದರನೆ ಅಂಬಾತಯ ಗಜವದನ ನೀ ಶಂಭಾಸುತ ll೨ll

ಜಾಹೀರಾತು

ವಿಕಟನು ನೀನೆ ವಿಘ್ನನಿವಾರಕ ವಿಘ್ನರಾಜ ಮೋದಕಪ್ರಿಯ l
ಸಂಕಟಹರನೆ ಸಿಂಧೂರವರ್ಣ ಮೊದಲ ಪೂಜೆಯ ಒಡೆಯ l
ಷಣ್ಮುಖಸೋದರ ಗಜಮುಖದವನೆ ವಕ್ರತುಂಡ ವಿಶ್ವಂಭರ l
ಸಿದ್ಧಿಬುದ್ಧಿಯರ ವರಿಸಿಹ ದೇವ ವಿಜಯವಿನಾಯಕ ಲಂಬೋದರ ll೪ll

Leave a Response