Recent Posts

Sunday, January 19, 2025
ದಕ್ಷಿಣ ಕನ್ನಡಸಿನಿಮಾಸುದ್ದಿ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ‘ರಾಧಾ ಕಲ್ಯಾಣ’ ನಾಯಕಿ, ಮಂಗಳೂರಿನ ರಾಧಿಕಾ ರಾವ್ ಪತಿ ಆಕರ್ಷ್ ಭಟ್ ಜೊತೆ ಫೋಟೋಶೂಟ್ – ಕಹಳೆ ನ್ಯೂಸ್

ರಾವಳಿ ಬ್ಯೂಟಿ ರಾಧಿಕಾ ರಾವ್ (Radhika Rao) ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಪತಿ ಆಕರ್ಷ್ ಭಟ್ (Akarsh Bhat) ಜೊತೆ ಮುದ್ದಾದ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಟ್ರೆಡಿಷನಲ್ ಮತ್ತು ಮಾಡ್ರನ್ ಎರಡು ಲುಕ್‌ನಲ್ಲೂ ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗ್ಳೂರ್ ಹುಡ್ಗಿ ಹುಬ್ಳಿ ಹುಡ್ಗ, ರಾಧಾ ಕಲ್ಯಾಣ (Radha Kalyana) ಸೀರಿಯಲ್‌ನಲ್ಲಿ ಗಮನ ಸೆಳೆದ ನಟಿ ರಾಧಿಕಾ ಅವರು ಕನ್ನಡ ಮತ್ತು ಸಾಕಷ್ಟು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಿಗೆ ರಾಧೆಯಾಗಿ ಮನಗೆದ್ದಿದ್ದಾರೆ.

ಮಂಗಳೂರಿನ ಆಕರ್ಷ್ ಭಟ್ (Akarsh Bhat) ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್- ಮೈಂಡ್ ರೀಡರ್ ಆಗಿದ್ದಾರೆ. ಆಕರ್ಷ್‌ ಜೊತೆ ರಾಧಿಕಾ ರಾವ್‌ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ (Love) ವಿಚಾರ ತಿಳಿಸಿ ಒಪ್ಪಿಸಿ ಮದುವೆ ಆದರು. ಈಗ ರಾಧಿಕಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಸಾಂಪ್ರದಾಯಿಕ ಲುಕ್ ಮತ್ತು ಮಾಡ್ರನ್ ಗೌನ್ ಧರಿಸಿ ವಿವಿಧ ರೀತಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.

ಚಿನ್ನದ ಝರಿ ಬಾರ್ಡರ್‌ನ ಸಾಂಪ್ರದಾಯಿಕ ಸೀರೆಯಲ್ಲಿ ರಾಧಿಕಾ ಮಿಂಚಿದ್ದಾರೆ. ರಾಯಲ್ ಥೀಮ್ ಫೋಟೋಶೂಟ್‌ನಲ್ಲಿ ನಟಿ ಯಾವ ರಾಣಿಗಿಂತಲೂ ಕಡಿಮೆಯಾಗಿ ಕಾಣುತ್ತಿಲ್ಲ. ಪಿಂಕ್ ಬಣ್ಣದ ಸಿಲ್ಕ್ ಸೀರೆಯುಟ್ಟು ಗಾರ್ವ್ ಸಿಲ್ವರ್ ಜ್ಯುವೆಲರಿ ಧರಿಸಿ ಪತಿ ಆಕರ್ಷ್ ಭಟ್ ಜೊತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. Swara Creations ಕ್ಯಾಮೆರಾ ಕೈಚಳಕದಲ್ಲಿ ರಾಧಿಕಾ ಫೋಟೋಶೂಟ್ ಮೂಡಿ ಬಂದಿದೆ.

ಅಷ್ಟೇ ಅಲ್ಲದೇ, ಕೆಂಪು ಬಣ್ಣದ ಉಡುಗೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಫೋಟೋಗ್ರಾಫರ್ ಕರುಣಾ (Karuna) ಕೈಚಳಕದಲ್ಲಿ ಈ ಚೆಂದದ ಫೋಟೋಗ್ರಾಫಿ ಮೂಡಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ರಾಧಿಕಾ ಬೇಬಿ ಬಂಪ್ ಫೋಟೋ ನೋಡಿ ಫ್ಯಾನ್ಸ್‌ ನಟಿಗೆ ಶುಭಹಾರೈಸಿದ್ದಾರೆ.