Recent Posts

Sunday, January 19, 2025
ಸುದ್ದಿ

ಅಕ್ರಮ ಕಸಾಯಿಖಾನೆ ಪ್ರಕರಣ: ವಿ.ಹಿಂ.ಪ. ಬಜರಂಗದಳ ವೇಣೂರು ಪ್ರಖಂಡದಿAದ ಪೋಲೀಸ್ ಠಾಣೆಗೆ ದೂರು –ಕಹಳೆ ನ್ಯೂಸ್

ವೇಣೂರು:ಮರೋಡಿ ಗ್ರಾಮದ ಅಜೀದ್ ಎಂಬವನು ಮನೆಯಲ್ಲಿ ಅಕ್ರಮವಾಗಿ ಗೋಮಾಂಸವನ್ನು ಮಾಡುತ್ತಿರುವುದು ಸಂಘಟನೆಯ ಗಮನಕ್ಕೆ ಬಂದಿದ್ದು, ಸ್ಥಳೀಯ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾಹಿತಿಯನ್ನು ಪೋಲೀಸ್ ಠಾಣೆಗೆ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ ಪೋಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.ತಾಲೂಕಿನ ಕೆಲವಡೆ ನಡೆಯುವ ಅಕ್ರಮ ಕಾಸಾಯಿಖಾನೆ ನಡೆಸುವುವವರನ್ನು ಪತ್ತೆ ಹಚ್ಚಿ ಅವರ ಆವರಣವನ್ನು ಮುಟ್ಟುಗೋಲು ಹಾಕಬೇಕು. ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವೇಣೂರು ಪೋಲೀಸ್ ಠಾಣೆಗೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವೇಣೂರು ಪ್ರಖಂಡ ಮನವಿಯಲ್ಲಿ ಆಗ್ರಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಗುರುರಾಜ್ ಬಂಟ್ವಾಳ, ವೇಣೂರು ಪ್ರಖಂಡ ಬಜರಂಗದಳ ಸಂಯೋಜಕ ಸಂತೋಷ್ ಮಂಜಿಲ ಮತ್ತು ಪ್ರಮುಖರಾದ ಸಂತೋಷ್ ಕೊಕ್ರಾಡಿ, ನಿರಂಜನ್ ಕೊಕ್ರಾಡಿ ಹಾಗೂ ಸಂಘಟನೆಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Adobe Scan May 19, 2023