Friday, September 20, 2024
ಸುದ್ದಿ

ನಿಷೇಧಿತ ಪ್ಲಾಸ್ಟಿಕ್ ಪತ್ತೆ: ಅಧಿಕಾರಿಗಳಿಂದ ತನಿಖೆ – ಕಹಳೆ ನ್ಯೂಸ್

ಮಂಗಳೂರು: ಪ್ಲಾಸ್ಟಿಕ್ ಎಂಬ ವಸ್ತುವನ್ನು ಅಳಿಸಲು ಸಾಧ್ಯವಾಗ್ತಾ ಇಲ್ಲ ಎಂಬುವುದನ್ನು ಅರಿತ ಸರ್ಕಾರ ಕೆಲವೊಂದು ಟೈಪ್‌ನ ಪ್ಲಾಸ್ಟಿಕ್‌ನ್ನು ಬಳಸುವುದನ್ನು ನಿಷೇಧಿಸಿದೆ. ಆದ್ರೆ ಆ ನಿಷೇಧಿತ ಪ್ಲಾಸ್ಟಿಕ್‌ನ್ನು ಮಂಗಳೂರಿನಲ್ಲಿ ಬಳಸ್ತಾ ಇದ್ದಾರೆ ಎಂದು ಮಾಹಿತಿ ತಿಳಿದ ಅಧಿಕಾರಿಗಳ ತಂಡವು ಮಂಗಳೂರಿನ ಹಲವಾರು ಅಂಗಡಿಗಳಿಗೆ ದಾಳಿ ನಡೆಸಿದ ಘಟನೆ ನಡೆದಿದೆ.

ಪ್ಲಾಸ್ಟಿಕ್ ಟ್ರೇಡ್ ಮತ್ತು ಪ್ರೋಪರ್ಟಿ ಟಾಕ್ಸ್ ಎಮ್‌ಸಿಸಿ ಆರೋಗ್ಯ ಅಧಿಕಾರಿಗಳು, ಪರಿಸರ ಇಂಜಿನಿರ‍್ಸ್, ಆರೋಗ್ಯ ತಪಾಸಣಾ ಅಧಿಕಾರಿಗಳು ಮತ್ತು ತೆರಿಗೆ ಕಲೆಕ್ಟರ್ಸ್ ತಂಡವು ಜಂಟಿಯಾಗಿ ಈ ಕಾರ್ಯಚರಣೆಯಲ್ಲಿ ಭಾಗವಹಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಮಂಗಳೂರಿನ ಬೀಬಿ ಮೈದಾನ್ ಕ್ರಾಸ್ ಮತ್ತು ಸೆಂಟ್ರಲ್ ಮಾರ್ಕೆಟ್‌ನ 75 ಅಂಗಡಿಗಳಿಗೆ ತನಿಖೆ ನಡೆಸಲು ಬಂದಿದ್ದು ಈ ವೇಳೆ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಲಭ್ಯವಾಗಿದೆ. ಒಟ್ಟು 200 ಕೆಜಿ ಬ್ಯಾನ್‌ಡ್ ಪ್ಲಾಸ್ಟಿಕ್ ವಶಪಡಿಸಲಾಗಿದ್ದು ತಲಾ ಅಂಗಡಿಯಿಂದ 2,500 ದಂಡಶುಲ್ಕವನ್ನು ಸಂಗ್ರಹಿಸಲಾಗಿದೆ.