Recent Posts

Monday, January 20, 2025
ಸುದ್ದಿ

ಜಕ್ರಿಬೆಟ್ಟು ಚತುಷ್ಪಥ ರಸ್ತೆಯಲ್ಲಿದ್ದ ಬೀದಿದೀಪಗಳು ಕಣ್ಮರೆ : ಕಳ್ಳತನವಾಗಿರುವ ಶಂಕೆ – ಕಹಳೆ ನ್ಯೂಸ್

ಬಂಟ್ವಾಳ : ಕಳೆದ ಎರಡು ವರ್ಷಗಳ ಹಿಂದೆ ಅಭಿವೃದ್ಧಿಗೊಂಡ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ಬಿ.ಸಿ.ರೋಡು-ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್ ಹೆದ್ದಾರಿಯ ಮಧ್ಯೆ ಅಳವಡಿಸಲಾಗಿರುವ ಎಲ್‌ಇಡಿ ಬೀದಿದೀಪಗಳಲ್ಲಿ ಇದೀಗ ಹೆಚ್ಚಿನ ಬೀದಿದೀಪಗಳು ಕಾಣೆಯಾಗಿದ್ದು, ಅವುಗಳನ್ನು ದುರಸ್ತಿಗಾಗಿ ತೆಗೆಯಲಾಗಿದೆಯೇ ಅಥವಾ ಕದ್ದು ಹೋಗಿವೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡಲಾರಂಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಹೆದ್ದಾರಿಯು ಒಟ್ಟು 19.85 ಕಿ.ಮೀ.ನಷ್ಟು ಅಭಿವೃದ್ಧಿಗೊಂಡಿದ್ದು, 3.85 ಕಿ.ಮೀ.ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಿ ಅವುಗಳ ಡಿವೈಡರ್ ಮಧ್ಯೆ ಎರಡೂ ಬದಿಗಳಿಗೂ ಪೂರಕವಾಗಿ ತಂತಿಗಳ ಮೂಲಕ ಪ್ರತ್ಯೇಕವಾದ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿತ್ತು.
ರಸ್ತೆಯ ವ್ಯಾಪ್ತಿಯು ಬಂಟ್ವಾಳ ಪುರಸಭೆಯ ವ್ಯಾಪ್ತಿಗೆ ಬರುವುದರಿಂದ ಬೀದಿದೀಪಗಳನ್ನು ಪುರಸಭೆಯೇ ನಿರ್ವಹಣೆ ಮಾಡಬೇಕಿದ್ದರೂ, ಪುರಸಭೆಯ ಅಽಕಾರಿಗಳ ಬಳಿ ಕೇಳಿದರೆ ನಾವು ಹ್ಯಾಂಡ್‌ಓವರ್ ಪಡೆದಿಲ್ಲ, ಇಲಾಖೆಯಿಂದ ಪತ್ರ ಮಾತ್ರ ಬಂದಿದೆ ಎಂಬ ಉತ್ತರವನ್ನು ನೀಡುತ್ತಿದ್ದಾರೆ. ಹ್ಯಾಂಡ್‌ಓವರ್ ಪಡೆಯದೇ ಬೀದಿದೀಪಗಳು ಉರಿಯುತ್ತಿದ್ದುದ್ದು ಹೇಗೆ, ಅದನ್ನು ನಿತ್ಯವೂ ಉರಿಸುವವರು ಯಾರು ಎಂಬೆಲ್ಲಾ ಪ್ರಶ್ನೆಗಳು ಉದ್ಬವಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟು ಸುಮಾರು 80 ಕಂಬಗಳಿಗೆ 160 ದೀಪಗಳನ್ನು ಅಳವಡಿಸಲಾಗಿದ್ದು, ಆದರೆ ಇದೀಗ ಸಾಕಷ್ಟು ಕಂಬಗಳಲ್ಲಿ ಒಂದು ಬದಿಯ ಎಲ್‌ಇಡಿ ಬಲ್ಬ್ಗಳು ಕಾಣೆಯಾಗಿದ್ದರೆ, ಇನ್ನು ಕೆಲವು ಕಂಬಗಳ ಎರಡೂ ಬದಿಯ ಬಲ್ಬ್ಗಳು ಮಾಯವಾಗಿವೆ. ಹೀಗಾಗಿ ಅದನ್ನು ಯಾರು ತೆಗೆದಿದ್ದಾರೆ ಎಂಬುದರ ಕುರಿತು ಮಾಹಿತಿ ಇಲ್ಲವಾಗಿದೆ.

ಒಂದು ವೇಳೆ ಸಂಬAಧಪಟ್ಟವರೇ ದುರಸ್ತಿಗಾಗಿ ತೆಗೆದಿದ್ದರೆ ಒಂದೇ ವರ್ಷದೊಳಗೆ ದುರಸ್ತಿಗೆ ಬರುವುದಾದರೆ ಕಡಿಮೆ ದುರಸ್ತಿಯ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆಯೇ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದೆ. ಕಳೆದ ಆಗಸ್ಟ್ ಬಳಿಕವೇ ದೀಪಗಳು ಉರಿಯಲಾರಂಭಿಸಿದ್ದು, ಇಷ್ಟು ಬೇಗ ದುರಸ್ತಿಗೆ ಬರುತ್ತದೆಯೇ ಎಂಬ ಸಂಶಯಗಳು ಕೂಡ ಮೂಡಿದೆ. ಇದೀಗ ದೀಪಗಳ ಅಳವಡಿಕೆಗೆ ಹಾಕಿರುವ ಕಂಬಗಳು ಮಾತ್ರ ಉಳಿಸಿಕೊಂಡಿದ್ದು, ಈ ಕುರಿತು ಸಂಬAಧಪಟ್ಟವರು ಪರಿಶೀಲನೆ ಮಾಡುವಂತೆ ಆಗ್ರಹಗಳು ಕೇಳಿಬಂದಿದೆ.