Monday, January 20, 2025
ಸುದ್ದಿ

ಜೂ.1ರಿಂದಲೇ ಮುಂಗಾರು ಶುರು – ಕಹಳೆ ನ್ಯೂಸ್

ಪ್ರಸಕ್ತ ಸಾಲಿನ ಮುಂಗಾರು ಜೂ.4ರಿಂದ ಶುರುವಾಗಲಿದೆ ಎಂದು ಹೇಳಿದ್ದ ಭಾರತೀಯ ಹವಾಮಾನ ಇಲಾಖೆ ಹೊಸ ಮುನ್ನೆಚ್ಚರಿಕೆ ನೀಡಿದೆ. ಅದರ ಪ್ರಕಾರ ಮುಂಗಾರು ಮಳೆಗೆ ಕಾರಣವಾಗುವ ನೈಋತ್ಯ ಮಾರುತಗಳು ಬಂಗಾಲ ಕೊಲ್ಲಿಯ ಆಗ್ನೇಯ ಭಾಗ, ದಕ್ಷಿಣ ಅಂಡಮಾನ್ ಸಮುದ್ರದ ಭಾಗದಲ್ಲಿ ಏಳಲು ಶುರುವಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದಾಗಿ ನಿರೀಕ್ಷೆಯಂತೆಯೇ ಜೂ.1ರಿಂದಲೇ ಮಳೆಗಾಲ ಶುರುವಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಮುಂದಿನ ಐದು ದಿನಗಳಲ್ಲಿ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ಒಳಗಾಗಿ ಹಾಲಿ ಉಂಟಾಗಿರುವ ಮುಂಗಾರು ಮಳೆಯ ಸೂಚನೆಗಳು ಮತ್ತಷ್ಟು ಪ್ರಬಲವಾಗುವ ಸಾಧ್ಯತೆಗಳು ಇವೆ ಎಂದು ಐಎಂಡಿ ಹೇಳಿದೆ. ಕಳೆದ ವರ್ಷ ಮೇ 29ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿತ್ತು. 2021ರಲ್ಲಿ ಜೂ.3, 2020ರಲ್ಲಿ ಜೂ.1, 2019ರಲ್ಲಿ ಜೂ.8, 2018ರಲ್ಲಿ ಮೇ 29ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು.