Monday, January 20, 2025
ಸುದ್ದಿ

ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಮೇ 22 ರಂದು ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ‘ಅಭಿನಂದನಾ ಸಮಾರಂಭ’ –ಕಹಳೆ ನ್ಯೂಸ್

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಹರೀಶ್ ಪೂಂಜಾ ಆಯ್ಕೆ ಗೊಂಡಿದ್ದು, ತಮ್ಮ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಮೇ 22 ರಂದು ಹಮ್ಮಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ 22 ರಂದು ಬೆಳ್ತಂಗಡಿಯ ಕಿನ್ಯಮ್ಮಯಾನೆ ಗುಣವತಿ ಅಮ್ಮ ಸಭಾಂಗಣ ದಲ್ಲಿ ಬೆಳಗ್ಗೆ ಕಾರ್ಯಕರ್ತರ ಅಭಿನಂದನ ಸಮಾರಂಭ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಹಗಲಿರುಳು ಕಾರ್ಯಕರ್ತ ದುಡಿದಿದ್ದು, ತಮ್ಮೆಲ್ಲಾ ವೈಯುಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಪಕ್ಷದ ಚಟುವಟಿಕೆಗಳಲ್ಲಿ ತೊಡಿಸಿಕೊಂಡಿದ್ರು. ಅವರೆಲ್ಲರ ಶ್ರಮದಿಂದಾಗಿ ಬೆಳ್ತಂಗಡಿ ಕ್ಷೇತ್ರದಲ್ಲಿ ಕಮಲ ಮತ್ತೆ ಅರಳಿದೆ.
ಶಾಸಕ ಹರೀಶ್ ಪೂಂಜಾ ಗೆಲುವಿನಿಂದ ದಣಿವು ಕಳೆದು ಮುಖದಲ್ಲಿ ಜಯದ ಮಂದಹಾಸ ಬೀರುತ್ತಿರುವ ಪ್ರೀತಿಯ ಕಾರ್ಯಕರ್ತರಿಗಾಗಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು, ಶಾಸಕರು, ಕಾರ್ಯಕರ್ತರು ಜೊತೆಯಾಗಿ ಗೆಲುವನ್ನು ಸಂಭ್ರಮಿಸಲಿದ್ದಾರೆ.