Recent Posts

Monday, January 20, 2025
ಸುದ್ದಿ

ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದರೂ ತಡೆಗೋಡೆ ನಿರ್ಮಾಣವಾಗಿಲ್ಲ-ಕಹಳೆ ನ್ಯೂಸ್

ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ 67ರಲ್ಲಿ ಪೊರ್ಕೋಡಿ ದ್ವಾರದ ಬಳಿ ಸುಮಾರು 2.75 ಕೋಟಿ ರೂಪಾಯಿ ಅನುದಾನದಲ್ಲಿ ತಡೆಗೋಡೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣ ಗೊಂಡಿದ್ದು, ಆದರೆ ತಡೆಗೋಡೆ ನಿರ್ಮಾಣವಾಗಿಲ್ಲ. ಮಳೆ ಬಂದಲ್ಲಿ ಮಣ್ಣು ಹಾಕಿ ತುಂಬಿಸಿದ ರಸ್ತೆ ಅಭಿವೃದ್ಧಿ ಕಾಮಗಾರಿ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಇದರಿಂದ ಮಂಗಳೂರು -ಬಜಪೆ ರಸ್ತೆ ಸಂಪರ್ಕವೂ ಕಡಿತವಾಗುವ ಭೀತಿ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಹೆದ್ದಾರಿ 67 ಕಳೆಗಡೆ ಪೊರ್ಕೋಡಿಗೆ ಹೋಗುವ ರಸ್ತೆಗೆ ಇಲ್ಲಿನ ತುಂಬಿಸಿದ ಮಣ್ಣು ಹೋಗಿ ಆ ರಸ್ತೆಯಲ್ಲಿಯೂ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರಿನಿAದ ಪೊರ್ಕೋಡಿ ದ್ವಾರದ ಬಳಿಯ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಅದರಲ್ಲಿ ತಿರುವಿನಿಂದ ಕೂಡಿದ ಕಿರಿದಾದ ರಸ್ತೆ ವಿಸ್ತ ರಣೆ ಕಾಮಗಾರಿ ಉಳಿದಿತ್ತು. ಈ ಕಾಮಗಾರಿಯನ್ನು ಮಾರ್ಚ್ನಲ್ಲಿ ಆರಂಭಿಸಲಾಗಿತ್ತು.