Recent Posts

Sunday, January 19, 2025
ಬೆಂಗಳೂರುಸಿನಿಮಾ

ಸಿಂಪಲ್ ಆಗಿ 37 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಶಿವಣ್ಣ –ಗೀತಾಕ್ಕ ದಂಪತಿ –ಕಹಳೆ ನ್ಯೂಸ್

ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಆದರ್ಶ ದಂಪತಿಗಳೆ0ದರೆ ಅದು ಶಿವಣ್ಣ-ಗೀತಕ್ಕ ದಂಪತಿ.


ಈ ಸೂಪರ್ ಜೋಡಿ ಅಭಿಮಾನಿಗಳ ಜೊತೆ ಸಿಂಪಲ್ ಆಗಿ ತಮ್ಮ 37ನೇ ಮದುವೆ ವಾರ್ಷಿಕೋತ್ಸವವನ್ನ ಸೆಲೆಬ್ರೇಟ್ ಮಾಡಿದ್ದಾರೆ. 37 ವರ್ಷದ ಹಿಂದೆ 1986 ಮೇ 19ನೇ ತಾರೀಖಿನಂದು ಅರಮನೆ ಮೈದಾನಲ್ಲಿ ಅದ್ಧೂರಿ ವಿವಾಹ ನೇರವೇರಿತ್ತು.ಗೀತಾ ಅವರನ್ನ ತಂದೆ ತಾಯಿ ಬಂದು ಬಳಗದ ಜೊತೆಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಡಾ.ಶಿವರಾಜ್ ಕುಮಾರ್ ಕೈ ಹಿಡಿದಿದ್ದರು. ಶಿವಣ್ಣ-ಗೀತಕ್ಕ ಮದುವೆ ಸಂಭ್ರಮಕ್ಕೆ ಡಾ.ರಾಜ್ ಮತ್ತು ಬಂಗಾರಪ್ಪನವರ ಕುಟುಂಬದ ಜೊತೆಗೆ ದೊಡ್ಮನೆಯ ಸಹಸ್ರಾರು ಅಭಿಮಾನಿಗಳು, ಬಂಗಾರಪ್ಪನವರ ಶಿವಮೊಗ್ಗ ಅಭಿಮಾನಿಗಳು ಸೇರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಣ್ಣ-ಗೀತಕ್ಕನ ಮದುವೆಯಲ್ಲಿ ರಾಜ್ ಮತ್ತು ಬಂಗಾರಪ್ಪನವರ ಕುಟುಂಬಕ್ಕೆ ಕೊನೆಗೆ ಊಟ ಸಿಗದೆ ಜನಾರ್ಧನ್ ಹೋಟೆಲ್‌ನಲ್ಲಿ ದೋಸೆ ತಿನ್ನೋ ಮಟ್ಟಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಿದ್ದರು.


ಇನ್ನು ಶಿವಣ್ಣ-ಗೀತಕ್ಕ ಬೆಂಗಳೂರಿನಲ್ಲಿ ಮದುವೆ ಆಗಿದ್ರು, ಬಳಿಕ ಚೆನ್ನೈನಲ್ಲಿ ಆರತಕ್ಷತೆಯನ್ನ ಅದ್ಧೂರಿಯಾಗಿ ಸಿನಿಮಾ ರಂಗಗಳ ಸ್ನೇಹಿತರಿಗಾಗಿ ರಾಜ್ ಮತ್ತು ಬಂಗಾರಪ್ಪ ಕುಟುಂಬ ಆಯೋಜನೆ ಮಾಡಿತ್ತು. ದಕ್ಷಿಣದ ಆಲ್ ಮೋಸ್ಟ್ ಆಲ್ ಎಲ್ಲಾ ಸಿನಿಮಾ ಸೆಲೆಬ್ರಿಟಿಸ್ ಪ್ಲಸ್ ಪೊಲಿಟಿಷಿಯನ್ಸ್ ಮದುವೆಗೆ ಸಾಕ್ಷಿಯಾಗಿದ್ದರುಈ ಸಂಭ್ರಮಕ್ಕೆ ಇಂದಿಗೆ 37ವರ್ಷ. ಸರಳವಾಗಿ ತನ್ನ ಮನೆ ಮಂದಿಯ ಜೊತೆಗೆ ಕೆಲವೇ ಕೆಲವು ಅಭಿಮಾನಿಗಳ ಸಮ್ಮುಖದಲ್ಲಿ ಶಿವಣ್ಣ-ಗೀತಕ್ಕ ದಂಪತಿ ಕೇಕ್ ಕಟ್ ಮಾಡೋದ್ರ ಮೂಲಕ 37ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನ ಸಂಭ್ರಮಿಸಿದ್ದಾರೆ.