ಮಂಗಳೂರು: 4 ಜಿ ಆಯ್ತು ಈಗ 5 ಜಿ ಬಗ್ಗೆ ಜನ ಆಲೋಚಿಸ್ತಾ ಇದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ದೂರ ಸಂಪರ್ಕ ನೀತಿಗೆ ಕೇಂದ್ರ ಅಸ್ತು ಎಂದಿದ್ದು, ಶೀಘ್ರದಲ್ಲೆ 5 ಜಿ ಇಂಟರ್ನೆಟ್ ಸೇವೆ ಪಡೆಯುವ ಆಶಾಭಾವನೆ ಮೂಡಿಸಿದೆ.
ನೂತನ ದೂರಸಂಪರ್ಕ ನೀತಿಯು 10,000 ಕೋಟಿ ಅಮೆರಿಕನ್ ಡಾಲರ್ ಬಂಡವಾಳ ಸೆಳೆಯುವ ಉದ್ದೇಶ ಹೊಂದಿದ್ದು 2022 ರ ವೇಳೆಗೆ 40 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ನೂತನ ದೂರಸಂಪರ್ಕ ನೀತಿಯಲ್ಲಿ ಬಳಕೆದಾರರಿಗೆ ವೇಗದ 5 ಜಿ ಇಂಟರ್ನೆಟ್ ಸೇವೆ ಒದಗಿಸುವುದು, ಆಪ್ಟಿಕಲ್ ಫೈಬರ್ ಬಳಕೆ ಮಾಡುವುದು, ದೇಶದ ಎಲ್ಲ ಭಾಗಗಳ ಜನರಿಗೆ ೫೦ ಎಂಬಿ ಪರ್ ಸೆಕೆಂಡ್ ವೇಗದ ಇಂಟರ್ನೆಟ್ ಸೇವೆ ದೊರಕುವುಂತೆ ಮಾಡುವ ಗುರಿಗಳನ್ನು ಹೊಂದಲಾಗಿದೆ. ದೂರಸಂಪರ್ಕ ನೀತಿಯಲ್ಲಿ 2022ರ ವೇಳೆಗೆ ಹಲವು ಗುರಿಗಳನ್ನು ಇರಿಸಿಕೊಳ್ಳಲಾಗಿದೆ. ಅವುಗಳಲ್ಲಿ ಕೆಲವು ಪ್ರಮುಖ ನಿರ್ಣಯಗಳು ಇಲ್ಲಿವೆ.
ಗ್ರಾಮ ನೆಟ್, ಭಾರತ್ ನೆಟ್, ಗ್ರಾಮ ನೆಟ್, ಜನವೈಫೈ, ನಗರನೆಟ್ ಇನ್ನೂ ಹಲವು ಇಂಟರ್ನೆಟ್ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ನೂತನ ದೂರಸಂಪರ್ಕ ನೀತಿ 2018ರಲ್ಲಿ ಉಲ್ಲೇಖಿಸಲಾಗಿದೆ.
50 ಎಂಬಿಪಿಎಸ್ ವೇಗದ ಇಂಟರ್ನೆಟ್ ಅನ್ನು ಎಲ್ಲರಿಗೂ ಕಲ್ಪಿಸಿ, 2020ರ ವೇಳೆಗೆ ಎಲ್ಲ ಗ್ರಾಮ ಪಂಚಾಯಿತಿಗಳಿಗೂ 1ಜಿಬಿಪಿಎಸ್ ವೇಗದ ಇಂಟರ್ನೆಟ್ ಸೇವೆ ಕಲ್ಪಿಸುವುದು ಮತ್ತು 2022 ರ ವೇಳೆಗೆ ವೇಗವನ್ನು 10ಜಿಬಿಪಿಎಸ್‌ಗೆ ಹೆಚ್ಚಿಸುವುದು.
50 ಲಕ್ಷ ಜನ ವೈಫೈ ಪಾಯಿಂಟ್‌ಗಳನ್ನು 2020ರ ವೇಳೆಗೆ ನಿರ್ಮಿಸುವುದು ಹಾಗೂ 1 ಕೋಟಿ ಜನವೈಫೈ ಪಾಯಿಂಟ್‌ಗಳನ್ನು ಸ್ಥಾಪಿಸುವುದು ಮುಖ್ಯ ಗುರಿಯಾಗಿದೆ.
ಹಾಗೇ ಡಾಟಾ ಭದ್ರತೆಯನ್ನು ಹೆಚ್ಚು ಮಾಡುವುದು, ಸರ್ಕಾರಿ ಸೇವೆಗಳನ್ನು ಆನ್‌ಲೈನ್ ಮೂಲಕ ತಲುಪಿಸುವ ಹೊಸ ದಾರಿಗಳನ್ನು ಕಂಡುಕೊಂಡು 40 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಜಾಗತಿಕ ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಭಾರತವು ಪರಿಣಾಮಕಾರಿ ಅಭಿವೃದ್ಧಿ ಸಾಧಿಸುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಗುರಿಗಳಾಗಿವೆ.