Recent Posts

Monday, January 20, 2025
ಬೆಂಗಳೂರುರಾಜ್ಯಸುದ್ದಿ

ಡಿಜಿಪಿ ಪ್ರವೀಣ್ ಸೂದ್‌ಗೆ ವಿಮುಕ್ತಿ ; ಡಾ.ಅಲೋಕ್ ಮೋಹನ್‌ಗೆ ಡಿಜಿ-ಐಜಿಪಿ ಹೆಚ್ಚುವರಿ ಹೊಣೆ – ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ತನಿಖಾ ದಳ(ಸಿಬಿಐ) ನಿರ್ದೇಶಕರಾಗಿ ನೇಮಕವಾಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್‌ರನ್ನು ಹುದ್ದೆಯಿಂದ ವಿಮುಕ್ತಿ ಮಾಡಿ ಶನಿವಾರ ಸರ್ಕಾರ ಆದೇಶಿಸಿದೆ. ಇವರಿಂದ ತೆರವಾದ ಡಿಜಿ-ಐಜಿಪಿ ಹುದ್ದೆಯನ್ನು ಹಿರಿಯ ಡಿಜಿಪಿ ಡಾ.ಅಲೋಕ್ ಮೋಹನ್‌ಗೆ ಹೆಚ್ಚುವರಿಯಾಗಿ ವಹಿಸಿ ಸರ್ಕಾರ ಇದೇ ವೇಳೆ ಆದೇಶ ಹೊರಡಿಸಿದೆ.

ಸಿಬಿಐನ ಹಾಲಿ ನಿರ್ದೇಶಕ ಸುಬೋದ್ ಕುಮಾರ್ ಜೈಸ್ವಾಲ್ ಅವರ ಅಧಿಕಾರ ಅವಧಿ ಮೇ 25ಕ್ಕೆ ಮುಕ್ತಾಯವಾಗಲಿದೆ. ನೂತನ ನಿರ್ದೇಶಕರ ಹುದ್ದೆಗೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಿ ಮೇ 14ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದರ ಮೇರೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿ ಹುದ್ದೆಯಿಂದ ವಿಮುಕ್ತಿ ಮಾಡಿದೆ. 2024ರ ಮೇ ನಲ್ಲಿ ನಿವೃತ್ತಿ ಆಗಬೇಕಾಗಿದ್ದ ಪ್ರವೀಣ್ ಸೂದ್, ಸಿಬಿಐ ನಿರ್ದೇಶಕ ಹುದ್ದೆ ವಹಿಸಿಕೊಂಡ ಹಿನ್ನೆಲೆಯಲ್ಲಿ 2025ರ ಮೇ ವರೆಗೂ ಮುಂದುವರಿಯಲಿದ್ದಾರೆ. ಸಿಬಿಐ ನಿರ್ದೇಶಕರ ಹುದ್ದೆಗೆ ಕರ್ನಾಟಕ ಕೇಡರ್ ಐಪಿಎಸ್‌ಗಳು ನೇಮಕ ಆದವರಲ್ಲಿ ಮೂರನೆಯವರು ಎಂಬ ಖ್ಯಾತಿಗೆ ಪ್ರವೀಣ್ ಸೂದ್ ಒಳಗಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತೊಂದೆಡೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವಾ ಹಿರಿತನದಲ್ಲಿ ಇರುವ ಡಾ. ಅಲೋಕ್ ಮೋಹನ್ ಅವರನ್ನು ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಆಯ್ಕೆಯಾಗುವ ಎಲ್ಲ ಲಕ್ಷಣಗಳಿವೆ.

ಪ್ರಸ್ತುತ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಹೋಂಗಾರ್ಡ್ ಮತ್ತು ಎಸ್‌ಡಿಆರ್‌ಎಫ್​ ಡಿಜಿಪಿ ಆಗಿರುವ ಡಾ.ಅಲೋಕ್ ಮೋಹನ್‌ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆ ಮತ್ತು ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿ ಸರ್ಕಾರ ಆದೇಶಿಸಿದೆ.

ಇವರ ನಂತರದಲ್ಲಿ ಸೇವಾ ಹಿರಿತನದಲ್ಲಿ ಡಾ.ಪಿ.ರವೀಂದ್ರನಾಥ್ ಮತ್ತು ಕಮಲ್ ಪಂತ್ ಇದ್ದಾರೆ. ಇವರೊಂದಿಗೆ ಡಾ.ಅಲೋಕ್ ಮೋಹನ್ ಹೆಸರನ್ನು ಸರ್ಕಾರಕ್ಕೆ ಗೃಹ ಇಲಾಖೆ ಶಿಫಾರಸ್ಸು ಮಾಡಲಾಗಿದೆ. ಅಂತಿಮವಾಗಿ ಮುಖ್ಯಮಂತ್ರಿ ಅವರು ಒಂದು ಹೆಸರು ಆಯ್ಕೆ ಮಾಡಲಿದ್ದಾರೆ. ಸೇವಾ ಹಿರಿತನದ ಮೇಲೆ ಡಿಜಿ-ಐಜಿಪಿ ಹುದ್ದೆಗೆ ನೇಮಕ ಮಾಡುವ ಪದ್ಧತಿ ಇದೆ. ಇದರ ಪ್ರಕಾರ ಡಾ. ಅಲೋಕ್ ಮೋಹನ್‌ಗೆ ಡಿಜಿಪಿ ಹುದ್ದೆ ಸಿಗುವ ಸಾಧ್ಯತೆಗಳಿವೆ.

ಬಿಹಾರ ಮೂಲದ ಡಾ.ಅಲೋಕ್‌ಕುಮಾರ್, ಎಂಎಸ್‌ಸಿ, ಎಂಫಿಲ್ ಮತ್ತು ಪಿಎಚ್‌ಡಿ ಮುಗಿಸಿದ್ದು, 1987ನೇ ಸಾಲಿನಲ್ಲಿ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದಾರೆ. 2025ರ ಏಪ್ರಿಲ್‌ನಲ್ಲಿ ನಿವೃತ್ತಿಯಾಗಲಿದ್ದಾರೆ.