ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಸಭೆ ಕರೆಯಲಿ : ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಆಗ್ರಹ – ಕಹಳೆ ನ್ಯೂಸ್
ಬೆಳ್ತಂಗಡಿ: ಈ ಬಾರಿ ಮಳೆಯ ವಿಳಂಬವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತದೆ. ಜನ ಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ ಇದರ ಸೂಕ್ತ ಪರಿಹಾರಕ್ಕೆ ಜಿಲ್ಲಾ ಆಡಳಿತ ಮತ್ತು ಸರಕಾರ ಕೂಡಲೇ ಜನಪ್ರತಿನಿದಿನಗಳ ಸಭೆ ಕರೆಯ ಬೇಕು ಮತ್ತು ಶಾಲಾ ಕಾಲೇಜು ಪ್ರಾರಂಭ ಮುಂದೂಡ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೇ 29ರಂದು ಶಾಲಾ ಕಾಲೇಜು ಆರಂಭದ ಕುರಿತು ಸುತ್ತೋಲೆ ಬಂದಿದೆ ಆದರೆ ಹವಾಮಾನ ಪ್ರಕಾರ ಜೂನ್ ಮೊದಲ ವಾರದ ಅನಂತರ ಮುಂಗಾರು ಮಳೆಯ ಸೂಚನೆ ಇದೆ. ಅಲ್ಲದೆ ಈ ವರ್ಷ ಮುಂಗಾರು ಪೂರ್ವ ಮಳೆಯೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಪ್ರಾರಂಭದ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು. ತರಗತಿ ಪ್ರಾರಂಭ ಆದರೆ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಆದುದರಿಂದ ಜಿಲ್ಲಾ ಆಡಳಿತ ಮತ್ತು ಸರಕರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.