Tuesday, January 21, 2025
ಸುದ್ದಿ

ಖಾಸಗಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್- ಅರುಣ್ ಪುತ್ತಿಲ ಮುಖಮುಖಿ : ವಿಡಿಯೋ ವೈರಲ್ – ಕಹಳೆ ನ್ಯೂಸ್

ಪುತ್ತೂರು:ಮದುವೆ ಕಾರ್ಯಕ್ರಮವೊಂದರಲ್ಲಿ ಪುತ್ತೂರು ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಮತ್ತು ಕಲ್ಲಡ್ಕ ಡಾ. ಪ್ರಭಾಕರ್‌ ಭಟ್‌ ಪರಸ್ಪರ ಮುಖಾಮುಖಿಯಾದ ಘಟನೆ ನಡೆದಿದೆ.

ಪೆರಾಜೆಯ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅರುಣ್‌ ಕುಮಾರ್‌ ಪುತ್ತಿಲ ಮತ್ತು ಕಲ್ಲಡ್ಕ‌ ಡಾ. ಪ್ರಭಾಕರ್‌ ಭಟ್ ಮುಖಾಮುಖಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಕೈ ಮುಗಿದು ನಮಸ್ಕರಿಸಿದ ಪುತ್ತಿಲ ಪ್ರಭಾಕರ್‌ ಭಟ್‌ ಅವರ ಕಾಲಿಗೆರಗಿ ಆಶೀರ್ವಾದ ಪಡೆದು ಕುತೂಹಲ ಮೂಡಿಸಿದ್ದಾರೆ. ಬೆನ್ನು ತಟ್ಟಿ ಅನುಗ್ರಹಿಸಿದ ಪ್ರಭಾಕರ್‌ ಭಟ್‌ ಊಟ ಆಯ್ತ ಎಂದು ಕೇಳುವ ಮೂಲಕ ಕುಶಲ ವಿಚಾರಿಸಿ ಮುಂದೆ ಹೆಜ್ಜೆ ಹಾಕಿದರು.

ಜಾಹೀರಾತು
ಜಾಹೀರಾತು
ಜಾಹೀರಾತು