ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ ಮರು ರಚನೆಗೆ ಸಂಬOಧಿಸಿದ ಕಾಮಗಾರಿ ಮೇ 31ಕ್ಕೆ ಪೂರ್ಣವಾಗಲಿದೆ. ಜೂ. 1ರಿಂದ ದಿನದ 24 ಗಂಟೆಯೂ ರನ್‌ವೇ ಲಭ್ಯವಾಗಲಿದೆ.
ಕಾಂಕ್ರೀಟ್ ರನ್‌ವೇ ಡಾಮ ರೀಕರಣ/ಬ್ಲ್ಯಾಕ್‌ಟಾಪ್ ಕಾಮ ಗಾರಿ ಮತ್ತು ದೀಪಗಳ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ 4 ತಿಂಗಳು ಹಗಲು ವಿಮಾನಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು. ರವಿವಾರ ಮತ್ತು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಬೆಳಗ್ಗೆ 9.30ರಿಂದ ಸಂಜೆ 6 ರವರೆಗೆ ರನ್‌ವೇ ಬಂದ್ ಇದೆ. ಸಂಜೆ 6ರಿಂದ ಬೆಳಗ್ಗೆ 9.30ರ ತನಕ ಮಾತ್ರ ಮಂಗಳೂರಿನಿAದ ವಿಮಾನಗಳ ಓಡಾಟ ನಡೆಯುತ್ತಿದೆ.
ಪ್ರಸ್ತುತ 2450 ಮೀ. ಉದ್ದ ಮತ್ತು 45 ಮೀ. ಅಗಲದ ಕಾಂಕ್ರೀಟ್ ರನ್‌ವೇ ಇದೆ. ಈ ಕಾಂಕ್ರೀಟ್ ರನ್‌ವೇ ಮೇಲೆ ಡಾಂಬರು ಹಾಕುವುದರಿಂದ ಟೇಕಾಫ್ ಮತ್ತು ಲ್ಯಾಂಡಿOಗ್ ಸಂದರ್ಭ ವಿಮಾನಗಳ ಚಕ್ರಗಳಿಗೆ ನೆಲದ ಮೇಲೆ ಹೆಚ್ಚು ಹಿಡಿತ ಮುಂದುವರೆಯಲಿದೆ. ಜತೆಗೆ ರನ್‌ವೇಯಲ್ಲಿ ಬೀಳುವ ನೀರು ಪೂರ್ಣ ಪ್ರಮಾಣದಲ್ಲಿ ಹೊರಗೆ ಹೋಗುವಂತೆ ಡಾಮರೀಕರಣ/ಬ್ಲ್ಯಾಕ್ ಟಾಪ್ ಪೂರ್ಣಗೊಳಿಸಲಾಗುತ್ತಿದೆ. ರಿ ಕಾರ್ಪೇಂಟಿOಗ್ ಕೆಲಸವು ರನ್‌ವೇ ಸೆಂಟರ್‌ಲೈನ್ ಲೈಟ್‌ಗಳ ಅಳವಡಿಕೆಯನ್ನೂ ಒಳಗೊಂಡಿದೆ. ಇದು ರಾತ್ರಿಯಲ್ಲಿ ವಿಮಾನ ಕಾರ್ಯಾಚರಣೆ ಮತ್ತು ಕಡಿಮೆ ಗೋಚರತೆ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಎಂದು ಮಾಹಿತಿ ತಿಳಿದು ಬಂದಿದೆ.