ಮಂಗಳೂರು: ವೃದ್ಧರೋರ್ವರಿಗೆ ಕರೆಮಾಡಿ ಹಲ್ಲೆನಡೆಸಿ ಬಲತ್ಕಾರವಾಗಿ ಚಿನ್ನವನ್ನು ದರೋಡೆ ಮಾಡಿದ ಘಟನೆ ಮಂಗಳೂರು ನಗರದಲ್ಲಿ ಬೆಳಕಿಗೆ ಬಂದಿದ್ದು ಅರೋಪಿಗಳನ್ನು ಬಂಧಿಸಲಾಗಿದೆ.
ಸೆ. 23ರಂದು ರಂದು ವೃದ್ದರೋರ್ವರಿಗೆ ಮಹಿಳೆಯೋರ್ವರು ದೂರವಾಣಿ ಕರೆ ಮಾಡಿ ಮಂಗಳೂರು ನಗರದ ಲೇಡಿಹಿಲ್ ಸ್ಟೇಡಿಯಂ ಬಳಿಗೆ ಬರುವಂತೆ ತಿಳಿಸಿ ವೃದ್ದರು ಕಾರಿನಲ್ಲಿ ಸ್ಟೇಡಿಯಂ ಬಳಿಗೆ ಬಂದಾಗ ವೃದ್ದರನ್ನು ಮಹಿಳೆ ಮತ್ತು 4 ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿ ಸುರತ್ಕಲ್‌ನ ರಾಜೇಶ್ ಪವಿತ್ರನ್ ಎಂಬವರ ಮನೆಯಲ್ಲಿ ಕೂಡಿ ಹಾಕಿ, ತಲಾ 5 ಲಕ್ಷ ಹಣ ಕೊಡಬೇಕೆಂದು ಇಲ್ಲದಿದ್ದಲ್ಲಿ ಮೆಮೋರಿ ಕಾರ್ಡ್ನಲ್ಲಿರುವ ಅಶ್ಲೀಲ ಚಿತ್ರಗಳನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಸಿ, ವೃದ್ದರು ಬೇಡಿಕೆ ಇಟ್ಟ ಹಣ ಕೊಡದಿದ್ದಾಗ ಆತನಿಗೆ ಎಲ್ಲರೂ ಸೇರಿ ಹಲ್ಲೆ ನಡೆಸಿ ಬಲಾತ್ಕಾರವಾಗಿ ಕುತ್ತಿಗೆಯಲ್ಲಿದ್ದ ನಾಲ್ಕುವರೆ ಪವನ್ ತೂಕದ ಚಿನ್ನದ ಚೈನ್, ಚಿನ್ನದ ಉಂಗರ 2, ವಾಚು, ಮತ್ತು, ನಗದು ರೂ. 18,000ವನ್ನು ದರೋಡೆ ಮಾಡಿರುತ್ತಾರೆ. ದರೋಡೆಗೆ ಒಳಗಾದ ವ್ಯಕ್ತಿ ಬರ್ಕೆ ಪೊಲೀಸ್ ಠಾಣೆಗೆ ಬಂದು ದುರು ದಾಖಾಲು ಮಾಡಿರುತ್ತಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ತಾಲೂಕು ಅಧ್ಯಕ್ಷೆಯಾದ ಆರೋಪಿ ಶ್ರೀಲತಾ ಮತ್ತು ಆರೋಪಿ ರಾಕೇಶ್ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ದರೋಡೆ ಮಾಡಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತರಲ್ಲಿದ್ದ ಮೆಮೋರಿ ಕಾರ್ಡು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ದಸ್ತಗಿರಿಗೆ ಬಾಕಿ ಇದ್ದು, ತಲೆ ಮರೆಸಿಕೊಂಡಿರುತ್ತಾರೆ.