Recent Posts

Monday, January 20, 2025
ಸುದ್ದಿ

ವಿಧಾನ ಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ಪ್ರವೇಶಿಸಿದ ಸುಳ್ಯದ ನೂತನ ಶಾಸಕಿ ಭಾಗೀರಥೀ ಮುರುಳ್ಯ –ಕಹಳೆ ನ್ಯೂಸ್

ಸುಳ್ಯ ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿಯಾಗಿ ಭಾಗೀರಥೀ ಮುರುಳ್ಯ ಅವರು ಆಯ್ಕೆಯಾಗಿದ್ದು, ಅವರು ಮೊದಲ ಬಾರಿ ವಿಧಾನ ಸೌಧಕ್ಕೆ ಪ್ರವೇಶಿಸುವಾಗ ವಿಧಾನ ಸೌಧದ ಮೆಟ್ಟಿಲುಗಳಿಗೆ ನಮಿಸಿ ಬಳಿಕ ಒಳಪ್ರವೇಶಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ದೇಗುಲ ಎಂದು ಕರೆಯಲ್ಪಡುವ ವಿಧಾನ ಸೌಧಕ್ಕೆ ಸುಳ್ಯ ಕ್ಷೇತ್ರದ ಶಾಸಕಿಯಾಗಿ ಭಾಗೀರಥೀ ಮುರುಳ್ಯ ಅವರು ಮೊದಲ ಬಾರಿಗೆ ಪ್ರವೇಶಿಸುತ್ತಿದ್ದಾರೆ. ಹಾಗಾಗಿ ವಿಧಾನ ಸೌಧಕ್ಕೆ ಗೌರವಯುತವಾಗಿ ನಮಸ್ಕರಿಸಿದರು.

ಅನೇಕ ರಾಜಕೀಯ ದಿಗ್ಗಜರು ಮೊದಲ ಬಾರಿಗೆ ವಿಧಾನ ಸೌಧಕ್ಕೆ, ಅಥವಾ ಲೋಕಾಸಭೆ ತೆರಳುವಾಗ ಈ ರೀತಿಯಾದ ನಮನವನ್ನ ಸಲ್ಲಿಸುತ್ತಾರೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಸಂಸತ್‌ಗೆ ಮೊದಲ ಬಾರಿ ಪ್ರವೇಶಿಸುವ ಸಂದರ್ಭದಲ್ಲಿ ಸಂಸತ್‌ನ ಮೆಟ್ಟಿಲುಗಳಿಗೆ ಸಮಸ್ಕರಿಸಿದ್ದರು. ಇದೀಗ ಶಾಸಕಿ ಭಾಗೀರಥೀ ಮುರುಳ್ಯ ಅವರು ಮೋದಿಯವರನ್ನು ಅನುಕರಣೆ ಮಾಡಿ, ಮಾದರಿಯಾಗಿದ್ದಾರೆ.