ಸಹೋದ್ಯೋಗಿಯ ಸ್ಯಾಲರಿ ಸ್ಲಿಪ್ ಬಳಸಿ ಚಿಟ್ ಫಂಡ್ ನಿಂದ ಸಾಲ ಪಡೆದು ವಂಚನೆ; ಬನ್ನೂರಿನ ಮೆಸ್ಕಾಂ ಅಟೆಂಡರ್ ಮತ್ತು ಚಿಟ್ ಫಂಡ್ ಮ್ಯಾನೇಜರ್ ವಿರುದ್ಧ ದೂರು- ಕಹಳೆ ನ್ಯೂಸ್
ಸಹೋದ್ಯೋಗಿಯ ಸ್ಯಾಲರಿ ಸ್ಲಿಪ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಸಹಿಯನ್ನು ದುರುಪಯೋಗ ಪಡಿಸಿ ಬ್ಯಾಂಕಿನಿಂದ ಸಾಲ ಪಡೆದು ಬಳಿಕ ವಂಚಿಸಿದ ಘಟನೆಯು ಪುತ್ತೂರಿನಲ್ಲಿ ನಡೆದಿದೆ. ಬನ್ನೂರಿನ ಮೆಸ್ಕಾಂ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸ್ತಾಇರೋ ನವೀನ್ ಎಂಬ ವ್ಯಕ್ತಿ ಅದೇ ಘಟಕದಲ್ಲಿ ಸ್ಟೋರ್ ಹೆಲ್ಪರ್ ಆಗಿ ಕಾರ್ಯನಿರ್ವಹಿಸ್ತಾ ಇರೋ ಯಶವಂತ ಗೌಡ ಎಂಬ ವ್ಯಕ್ತಿಯ ವೈಕ್ತಿಕ್ತಿಕ ದಾಖಲೆಗಳನ್ನು ಹಾಗೂ ಸಹಿ ಬಳಸಿಕೊಂಡು ಸಿಂಚನ ಚಿಟ್ಸ್ ಪ್ರೈವೇಟ್ (ಲಿ.)ಪುತ್ತೂರು ಇಲ್ಲಿ ಸಾಲ ಪಡೆದುಕೊಂಡಿದ್ದಾರೆ.
ಇದಕ್ಕೆ ಯಶವಂತ್ ಅವರ ಅನುಮತಿಯಿಲ್ಲದೆ ಅವರ ದಾಖಲೆಗಳನ್ನು ಬಳಸಿಕೊಂಡು ಜಾಮೀನುದಾರರನ್ನಾಗಿ ಮಾಡಿಕೊಂಡಿದ್ದಾರೆ. ಇದೀಗ ನವೀನ್ ಅವರು ಚಿಟ್ ವ್ಯವಹಾರದಲ್ಲಿ ಸಾಲ ಕಟ್ಟದೆ ಬಾಕಿ ವಸೂಲಾತಿಯ ಬಗ್ಗೆ ಯಶವಂತ್ ಅವರಿಗೆ ನೋಟೀಸ್ ಬಂದಿದೆ. ಈ ಬಗ್ಗೆ ಯಶವಂತ್ ಅವರು ವಿಚಾರಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಇದನ್ನು ಕೂಲಂಕುಶವಾಗಿ ಸೂಕ್ತ ತನಿಖೆ ನಡೆಸಿ ಯಶವಂತ್ ಅವರ ಸ್ಯಾಲರಿ ಸ್ಲಿಪ್ ನೀಡಿದವರ ಹಾಗೂ ನವೀನ್ ವಿರುದ್ಧ ಮತ್ತು ಸಿಂಚನ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕಠಿಣ ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಬೇಕೆಂದು ಪುತ್ತೂರು ಪೊಲೀಸ್ ಠಾಣೆಗೆ ಹಾಗೂ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಈ ಈರ್ವರ ವಿರುದ್ಧ ಯಶವಾಂತ್ ಇವರು ದೂರು ಸಲ್ಲಿಸಿದ್ದಾರೆ.