Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸಂತಾಪಸುದ್ದಿಸುಳ್ಯ

ಸುಳ್ಯ : ಬೈಕ್ – ಕಾರು ಭೀಕರ ಅಪಘಾತ ; ಕೆವಿಜೆ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯ – ಕಹಳೆ ನ್ಯೂಸ್

ಸುಳ್ಯ: ಇಲ್ಲಿನ ಪಾಲಡ್ಕ ಬಳಿ ಬೈಕ್ ಮತ್ತು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಕೆ.ವಿ.ಜಿ. ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಸ್ಥಳದಲ್ಲೆ ಮೃತಪಟ್ಟ ಘಟನೆ ಮೇ 22 ರಂದು ವರದಿಯಾಗಿದೆ.

ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಭ್ರಮ್ ಮತ್ತು ಸ್ವರೂಪ್ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಪೆರಾಜೆ ಕಡೆಯಿಂದ ಸುಳ್ಯ ಕಡೆಗೆ ಕಾರು ಬರುತ್ತಿತ್ತು. ಪಾಲಡ್ಕದಲ್ಲಿ ಪರಸ್ಪರ ಗುದ್ದಿದ ಪರಿಣಾಮವಾಗಿ ಕೆವಿಜಿ ಆಯುರ್ವೇದ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಸ್ವರೂಪ್ ಎಂಬವರು ಸ್ಥಳದಲ್ಲೇ ಮೃತಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೋರ್ವ ಸವಾರ ಸಂಭ್ರಮ್ ಎಂಬವರಿಗೆ ಗಾಯಗಳಾಗಿದ್ದು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು