Recent Posts

Monday, January 20, 2025
ಸುದ್ದಿ

ನದಿಗೆ ಅಳವಡಿಸಿದ್ದ ಪಂಪಿನ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು –ಕಹಳೆ ನ್ಯೂಸ್

ಯುವಕನೋರ್ವನಿಗೆ ನದಿಗೆ ಅಳವಡಿಸಲಾದ ಪಂಪಿನ ವಿದ್ಯುತ್ ಸ್ಪರ್ಶಿಸಿ, ಸಾವನ್ನಪ್ಪಿದ್ದ ಘಟನೆ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ನ ಕುಮಾರಧಾರ ನದಿ ತೀರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಯುವಕನನ್ನು ಶರೀಪುದ್ದೀನ್ (19) ಎಂದು ಗುರುತಿಸಲಾಗಿದ್ದು, ಈತ ತನ್ನ ತಾಯಿಯೊಂದಿಗೆ ಮಾವನ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ನದಿ ದಡಕ್ಕೆ ಹೋಗಿದ್ದ ವೇಳೆ ನೀರಿಗೆ ಜಾರಿದ ಶರೀಪುದ್ದೀನ್ ರಕ್ಷಣೆಗಾಗಿ ಕೈಗೆ ಸಿಕ್ಕಿದ್ದ ಪಂಪಿಗೆ ಅಳವಡಿಸಲಾದ ವಿದ್ಯುತ್ ತಂತಿಯನ್ನೇ ಹಿಡಿಯುವ ವೇಳೆ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದೆ.
ಇನ್ನೂ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.