Recent Posts

Monday, January 20, 2025
ಅಂತಾರಾಷ್ಟ್ರೀಯಉಡುಪಿದಕ್ಷಿಣ ಕನ್ನಡಸುದ್ದಿ

ಸಿಡ್ನಿಯಲ್ಲಿ ಪ್ರಧಾನಿ ಸ್ವಾಗತಕ್ಕೆ ಕರಾವಳಿಯ ತಂಡದ ನೃತ್ಯ ; ಯಕ್ಷಗಾನದ ಸೊಬಗನ್ನು ಅಳವಡಿಸಿದ ವಿಶೇಷ ನೃತ್ಯದ ಮೂಲಕ ನರೇಂದ್ರ ಮೋದಿಯವರಿಗೆ ಸ್ವಾಗತ – ಕಹಳೆ ನ್ಯೂಸ್

ಮಂಗಳೂರು: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೇ 23ರಂದು ಸಿಡ್ನಿಯಲ್ಲಿ ಭಾರತೀಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಗ ಮೋದಿಯವರನ್ನು ಸ್ವಾಗತಿಸಲು ನಡೆಯಲಿರುವ ವಿಶೇಷ ನೃತ್ಯ ಕಾರ್ಯಕ್ರಮವೊಂದು ಮಂಗಳೂರು ಮೂಲದವರಿಂದ ಸಿದ್ಧಗೊಂಡಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಮೂಲದ ವಿದುಷಿ ಪಲ್ಲವಿ ಭಾಗವತ್‌ ಅವರು ತಮ್ಮ ನೃತ್ಯ ಸಂಸ್ಥೆ “ನಾಟ್ಯೋಕ್ತಿ ಶಿಷ್ಯ ವೃಂದದೊಂದಿಗೆ “ಕಾಂತಾರ’ ಸಿನೆಮಾದ ಹಾಡುಗಳ ಮೂಲಕ ಮನರಂಜಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ಹಳ್ಳಿಯ ಸೊಬಗನ್ನು ತೋರಿಸುವ ಜಾನಪದ ನೃತ್ಯ ಹಾಗೂ ಯಕ್ಷಗಾನದ ಸೊಬಗನ್ನು ಅಳವಡಿಸಿದ ಈ ನೃತ್ಯದಲ್ಲಿ ಮಂಗಳೂರು, ಉಡುಪಿ ಸಹಿತ ದೇಶ-ವಿದೇಶದ ಶಿಷ್ಯ ವೃಂದ ಪಾಲ್ಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ನಾಟ್ಯನಿಲಯಂ ಮಂಜೇಶ್ವರ ಹಾಗೂ ಕರ್ನಾಟಕ ಕಲಾಶ್ರೀ ವಿದುಷಿ ಕಮಲಾ ಭಟ್‌ ಬಳಿ ತಮ್ಮ ಭರತನಾಟ್ಯ ವಿದ್ವತ್‌ ಪೂರೈಸಿರುವ ಪಲ್ಲವಿ ಅವರು ಐಟಿಯಲ್ಲಿ ಕಾರ್ಯ ನಿರ್ವಹಿಸುತ್ತಾ ತಮ್ಮ ಭಾರತನಾಟ್ಯ ಸಂಸ್ಥೆಯನ್ನು ಹಲವು ವರ್ಷಗಳಿಂದ ಸಿಡ್ನಿಯಲ್ಲಿ ನಡೆಸುತ್ತಿದ್ದಾರೆ. ದ.ಕ., ಉಡುಪಿಯ ಆಶ್ವಿ‌ಕಾ ರಾವ್‌, ವಾದಿರಾಜ್‌ ರಾವ್‌, ಗೌತಮ್‌, ಅನಿಶಾ ಪೂಜಾರಿ ಸಹಿತ ಕಲಾವಿದರು ನೃತ್ಯದಲ್ಲಿ ಭಾಗವಹಿಸಲಿದ್ದಾರೆ.