Monday, January 20, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಲೋಕಸಭೆ ಸ್ಪರ್ಧೆಗೆ ಸಂಘದ ನಿಷ್ಠಾವಂತ ಕಾರ್ಯಕರ್ತ ಲಕ್ಷ್ಮೀ ಪ್ರಸಾದ್‌ರನ್ನು ಕಣಕ್ಕಿಳಿಸಿ..!! : ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇರುವ ಬರಹ –ಕಹಳೆ ನ್ಯೂಸ್

ಸಂಘಟನೆಯ ತವರೂರು, ಬಿಜೆಪಿಯ ಭದ್ರಕೋಟೆ, ಮುಖ್ಯಮಂತ್ರಿಯಿoದ ಹಿಡಿದು ದಿಲ್ಲಿವರೆಗೆ ದಿಗ್ಗಜರನ್ನು ಕಳುಹಿಸಿದ ಕ್ಷೇತ್ರವೆಂದರೆ ಅದು ಪುತ್ತೂರು ವಿಧಾನ ಸಭಾ ಕ್ಷೇತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿನ ದಿನಗಳಲ್ಲಿ ದೇಶದ ಮೂಲೆಮೂಲೆಗಳಲ್ಲಿ ಪುತ್ತೂರು ಬಹಳಷ್ಟು ಸದ್ದು ಮಾಡ್ತಾ ಇದ್ದು, ದಿನಕಳೆದಂತೆ ಪುತ್ತೂರು ವಿಧಾನ ಸಭಾ ಕ್ಷೇತ್ರ ಹೊಸ ಹೊಸ ಆಯಾಮಗಳ ಪರಿಚಯ ಮಾಡಿಕೊಂಡು ಸುದ್ದಿಯಾಗುತ್ತಿದೆ.

ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಿ, ಬೆರಳು ಎಣಿಕೆ ಸಾವಿರ ಮತಗಳಿಂದ ಸೋಲನ್ನ ಕಂಡರು. ಇದೀಗ ಅವರ ಅಭಿಮಾನಿಗಳು ಮುಂದಿನ ವರ್ಷದ ಲೋಕಾ ಸಭಾ ಚುನಾವಣೆಗೆ ಪುತ್ತಿಲ ಅವರನ್ನು ನಿಲ್ಲಿಸುವುದಕ್ಕಾಗಿ ಪಣ ತೊಟ್ಟಿದ್ದಾರೆ.

ವಿಪರ್ಯಾಸ ಏನೆಂದರೆ ಇವರುಗಳ ತಯಾರಿಯ ಮಧ್ಯೆ ಇನ್ನೊಬ್ಬ ತರುಣನ ಕುರಿತ ಪೋಟೋ ಸಹಿತ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ.

ಹೌದು, ಸಮಾಜ ಸೇವೆಗಾಗಿ ಮನೆ ಮಠತೊರೆದ ಸಂಘದ ನಿಷ್ಠಾವಂತ ಯುವಕನಿಗೆ ಈ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಲು ಪಕ್ಷ ಮತ್ತು ಹಿರಿಯರು ಅವಕಾಶ ಮಾಡಿಕೊಡಿ ಎಂಬ ಕೂಗು ಕೇಳ್ತಾ ಇದೆ.

ಸೋಷಿಯಲ್ ಮಿಡಿಯಾದಲ್ಲಿ ಲಕ್ಷೀ ಪ್ರಸಾದ್ ಪರವಾಗಿ ಬರಹಗಳ ಪೊಸ್ಟರ್ ಕಾಣ್ತ ಇದ್ದು, ಅದರಲ್ಲಿ ಲಕ್ಷ್ಮೀ ಪ್ರಸಾದ್ ಮನೆ ಮಠಗಳನ್ನು ತೊರೆದು ತನ್ನ ಜೀವನವನ್ನೆ ಭಾರತಾಂಬೆಯ ಸೇವೆಗಾಗಿ ಅರ್ಪಿಸುತ್ತಿರುವ ಎಳೆ ವಯಸ್ಸಿನ ಉತ್ಸಾಹಿ ಯುವಕನಾಗಿದ್ದಾರೆ. ಸದ್ದಿಲ್ಲದೆ ಸಂಘದ ಹಾಗೂ ಪಕ್ಷದ ಧ್ಯೇಯೋದ್ದೇಶಗಳನ್ನು ಮನ, ಮನೆಗಳಿಗೆ ತಲುಪಿಸಿ, ಪಕ್ಷ ಹಾಗೂ ಸಂಘಟನೆಯನ್ನು ಬಲವರ್ಧನೆಗೊಳಿಸುವಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಹಾಗೂ ಸಂಘದ ನಿಷ್ಠಾವಂತ ಕಾರ್ಯಕರ್ತ ನಮ್ಮೆಲ್ಲರ ಪ್ರೀತಿಯ ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ. ಇವರು ಗುರುಕುಲದಲ್ಲಿ ವಿದ್ಯಾಭ್ಯಾಸ ಆರಂಭಿಸಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುತ್ತಾರೆ. ಮಾತಿನ ಮಲ್ಲ ಹಾಗೂ ಸಂಘಟನಾ ಚತುರರಾಗಿರುವ ಇವರು ರಾಜ್ಯದ ಮೂಲೆ ಮೂಲೆಗಳಿಗೆ ಸಂಚರಿಸಿ ಸಂಘಟನೆಯನ್ನು ಬಲಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡಿರುತ್ತಾರೆ.

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ಇವರನ್ನು ಮುಂದಿನ ಲೋಕಸಭಾ ಚುನಾವಣಾ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಯಾಗಿ ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆ ಮಾಡುವಂತೆ ನಮ್ಮೆಲ್ಲರ ವಿನಂತಿ ಎಂಬ ಬರಹ ಕಾರ್ಯಕರ್ತರ ಹೆಸರಿನಲ್ಲಿ ಹರಿದಾಡ್ತಯಿದೆ.