Recent Posts

Tuesday, January 21, 2025
ಸುದ್ದಿ

ನಿವೃತ್ತ ಸೈನಿಕ ಪಾಸ್ಕಲ್ ದಾಂತಿಸ್ ನಿಧನ – ಕಹಳೆ ನ್ಯೂಸ್

ಬಂಟ್ವಾಳ: ನಿವೃತ್ತ ಸೈನಿಕ, ಪ್ರಗತಿಪರ ಕೃಷಿಕ, ಮೂಡುಪಡುಕೋಡಿ ಗ್ರಾಮದ ಪಾಡಿ ನಿವಾಸಿ ಪಾಸ್ಕಲ್ ದಾಂತಿಸ್(78)ಅವರು ಅಸೌಖ್ಯದಿಂದ ಮೇ 23ರಂದು ಸ್ವ ಗೃಹ ದಲ್ಲಿ ನಿಧನ ಹೊಂದಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಪತ್ನಿ, ನಿವೃತ್ತ ಮುಖ್ಯ ಶಿಕ್ಷಕಿ ರೆನ್ನಿ ಪಾಯ್ಸ್ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಪಾಸ್ಕಲ್ ಅವರು ವಾಯುದಳದಲ್ಲಿ 15ವರ್ಷ ಸೇವೆ ಸಲ್ಲಿಸಿದ್ದರು. 1971ರಲ್ಲಿ ನಡೆದ ಭಾರತ-ಬಾಂಗ್ಲಾ ಮತ್ತು ಭಾರತ-ಪಾಕಿಸ್ತಾನ
ಯುದ್ಧದಲ್ಲಿ ಅವರು ಭಾಗವಹಿಸಿದ್ದರು. ಬಳಿಕ 1979ರಲ್ಲಿ ನಿವೃತ್ತಿ ಹೊಂದಿದ್ದರು. ಅವರ ಸೇವೆಯನ್ನು ಗುರುತಿಸಿ ಹಲವಾರು ಸಂಘ, ಸಂಸ್ಥೆಗಳು ಸಮ್ಮಾನಿಸಿದ್ದವು. ನಿವೃತ್ತಿ ನಂತರ ಅವರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಅವರ ಅಂತಿಮ ಯಾತ್ರೆ ಬುಧವಾರ ಮಧ್ಯಾಹ್ನ 3.30 ಕ್ಕೆ ನಡೆಯಲಿದ್ದು, 4 ಗಂಟೆಗೆ ವಗ್ಗ, ನೀರ್ಖಾನ ಚರ್ಚ್ ನಲ್ಲಿ ಬಲಿಪೂಜೆ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.