Sunday, January 19, 2025
ಸುದ್ದಿ

ಚಾಂಪಿಯನ್ ಆಫ್ ಅರ್ಥ್ ಪ್ರಶಸ್ತಿಗೆ ನರೇಂದ್ರ ಮೋದಿ ಹೆಸರು ಆಯ್ಕೆ – ಕಹಳೆ ನ್ಯೂಸ್

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತ ಪ್ರಶಸ್ತಿಯಾದ ‘ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಗೆ ವಿಶ್ವಸಂಸ್ಥೆ ಆಯ್ಕೆ ಮಾಡಿದೆ.

ಮೋದಿ ಅವರ ಹೆಸರಿನೊಂದಿಗೆ, ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಲ್ ಮ್ಯಾಕ್ರೋನ್ ಅವರ ಹೆಸರನ್ನೂ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಪರಿಸರ ಜಾಗೃತಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಹತ್ತು ಹಲವು ಯೋಜನೆಗಳು ಮತ್ತು 2020ರ ಹೊತ್ತಿಗೆ ಭಾರತದಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಉಪಯೋಗವನ್ನು ನಿಲ್ಲಿಸುವುದಕ್ಕೆ ನಿರ್ಧರಿಸಿರುವ ಅವರ ನಡೆಯನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೌರಶಕ್ತಿ ಬಳಕೆ ಮತ್ತು ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ದೇಶಗಳು ಒತ್ತು ನೀಡುತ್ತಿರುವುದನ್ನು ಮನಗಂಡ ವಿಶ್ವಸಂಸ್ಥೆ ಈ ಪ್ರಶಸ್ತಿಗೆ ಮೋದಿ ಮತ್ತು ಮ್ಯಾರ್ಕೋನ್ ಅವರನ್ನು ಆರಿಸಿದೆ.