Wednesday, January 22, 2025
ಸುದ್ದಿ

ವಿಧಾನಸಭೆ ‘ನೂತನ ಸ್ಪೀಕರ್‌’ ಆಗಿ ‘ಯುಟಿ ಖಾದರ್‌’ ಅವಿರೋಧ ಆಯ್ಕೆ, ಅಧಿಕಾರ ಸ್ವೀಕಾರ

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಯುಟಿ ಖಾದರ್‌ ಅವಿರೋಧ ಆಯ್ಕೆಯಾಗಿದ್ದಾರೆ. ಸ್ಪೀಕರ್‌ ಸ್ಥಾನಕ್ಕೆ ಯುಟಿ ಖಾದರ್‌ ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದರು, ಹೀಗಾಗಿ ಅವರು ಇಂದು ಅಧಿಕೃತವಾಗಿ ಸ್ಪೀಕರ್‌ ಆಗಿ ಅಧಿಕಾರ ಸ್ವೀಕಾರವನ್ನು ಹಂಗಾಮಿ ಸ್ಪೀಕರ್‌ ಆರ್.ವಿ ದೇಶಪಾಂಡೆ ಅವರಿಂದ ಸ್ವೀಕಾರ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ನೂತನ ಸ್ಪೀಕರ್‌ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಅಭಿನಂದನೆ ಸಲ್ಲಿಸಿದರು.

ಇನ್ನೂ ಯುಟಿ ಖಾದರ್‌ ಅವರು ಆರಂಭದಲ್ಲಿ ಸ್ಪೀಕರ್‌ ಆಗಲು ಒಪ್ಪಿಗೆ ನೀಡಲಿಲಿಲ್ಲ, ಬಳಿಕ ಹೈಕಮಾಂಡ್‌ ಮತ್ತು ಸಿಎಂ ಡಿ.ಸಿಎಂ ಮಧ್ಯಪ್ರವೇಶದಿಂದ ಅವರು ಸ್ಪೀಕರ್‌ ಆಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಉಳ್ಳಾಲ ವಿಧಾನಸಭೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದು. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದ ವೇಳೆಯಲ್ಲಿ ಯುಟಿ ಖಾದರ್‌ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದಲ್ಲೇ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯುಟಿ ಖಾದರ್ ಅವರು ಉಪ ವಿ.ಪ ನಾಯಕನಾಗಿ ಕಾರ್ಯನಿರ್ವಹಿಸಿದ್ದರು.