Wednesday, January 22, 2025
ಸುದ್ದಿ

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಗ್ರಾಮ ಲೆಕ್ಕಿಗ, ಮನೆಯಲ್ಲಿ ಪತ್ತೆಯಾಯ್ತು ಚಿನ್ನ, ಕೋಟಿ-ಕೋಟಿ ಹಣ!

ಲಂಚ ಸ್ವೀಕರಿಸುವಾಗ ಕೇರಳದ ಪಾಲಕ್ಕಾಡ್​ ಜಿಲ್ಲೆಯಲ್ಲಿ​ ಗ್ರಾಮ ಲೆಕ್ಕಿಗನೊಬ್ಬ ಸಿಕ್ಕಿಬಿದ್ದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಲಕ್ಕಯಂ ಗ್ರಾಮ ಕಚೇರಿಯಲ್ಲಿ ಫೀಲ್ಡ್​ ಆಫೀಸರ್​ ಆಗಿ ಕೆಲಸ ಮಾಡುತ್ತಿದ್ದ ಸುರೇಶ್​ ಕುಮಾರ್​ ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಸ್ಥಳ ಪ್ರಮಾಣಪತ್ರ ನೀಡುವುದಕ್ಕಾಗಿ 2500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ಮಾಡಿ ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಅಧಿಕಾರಿಗಳ ಸುರೇಶ್​ ಕುಮಾರ್​ ಅವರ ಮನ್ನಾರಕಟ್ಟೆ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಆತನ ಮನೆ ಮೇಲೆ ದಾಳಿ ಮಾಡಿದಾಗ ಅಲ್ಲಿ ಪತ್ತೆಯಾದ ಸಂಪತ್ತನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಗ್ರಾಮ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಕುಮಾರ್​ ಮನೆಯಲ್ಲಿ 35 ಲಕ್ಷ ರೂಪಾಯಿ ನಗದು ಹಾಗೂ 17 ಕೆಜಿ ಚಿನ್ನಾಭರಣ ಪತ್ತೆಯಾಗಿದ್ದು, ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದಲ್ಲದೇ 45 ಲಕ್ಷ ರೂಪಾಯಿಗಳ ಸ್ಥಿರ ಠೇವಣಿಯ ದಾಖಲೆಯನ್ನು ವಿಜಿಲೆನ್ಸ್ ತಂಡ ವಶಕ್ಕೆಪಡೆದುಕೊಂಡಿದೆ. ಬ್ಯಾಂಕ್ ಖಾತೆಯಲ್ಲಿಯೂ 25 ಲಕ್ಷ ಇರುವುದು ಪತ್ತೆಯಾಗಿದೆ.

ಒಟ್ಟಾರೆ ನಗದು, ಸ್ಥಿರ ಠೇವಣಿ ಮೊತ್ತ, ಪಾಸ್ ಬುಕ್ ಸೇರಿದಂತೆ ಸುರೇಶ್ ಕುಮಾರ್​ ಮನೆಯಲ್ಲಿ 1.5 ಕೋಟಿ ರೂಪಾಯಿ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಪಾಲಕ್ಕಯಂ ಗ್ರಾಮ ವ್ಯಾಪ್ತಿಯಲ್ಲಿ 45 ಎಕರೆ ಜಮೀನು ಹೊಂದಿರುವ ಮಂಚೇರಿಯ ನಿವಾಸಿಯೊಬ್ಬರು ಸ್ಥಳ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಗ್ರಾ.ಪಂ.ಕಚೇರಿಯಲ್ಲಿ ವಿಚಾರಿಸಿದಾಗ ಕಡತ ಸುರೇಶ್ ಕುಮಾರ್ ಅವರ ಬಳಿ ಇರುವುದು ಪತ್ತೆಯಾಗಿದೆ. ಸುರೇಶ್ ಕುಮಾರ್ ಅವರ ಫೋನ್​ಗೆ ಕರೆ ಮಾಡಿದಾಗ 2500 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನಂತರ ಆ ವ್ಯಕ್ತಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಣದೊಂದಿಗೆ ಹೋಗಿದ್ಧಾನೆ, ಲಂಚ ಪಡೆಯುವಾಗ ಆತನನ್ನು ಅಧಿಕಾರಿಗಳು ಹಿಡಿದಿದ್ದಾರೆ.