Wednesday, January 22, 2025
ಸುದ್ದಿ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಒಂದು ಅಂಕ ಹೆಚ್ಚು ಗಳಿಸಿದಲ್ಲಿ ಶುಲ್ಕ ವಾಪಸ್..! – ಕಹಳೆ ನ್ಯೂಸ್

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದಲ್ಲಿ ಒಂದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಂಕ ಬದಲಾವಣೆಯೊಂದಿಗೆ ಕಟ್ಟಿದ ಶುಲ್ಕವನ್ನು ಮರುಪಾವತಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಮೊದಲು ಕನಿಷ್ಠ 6 ಅಂಕ ಹೆಚ್ಚು ಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಬದಲಾವಣೆಯ ಅಂಕ ನೀಡುತ್ತಿತ್ತು.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಿಯಮಗಳು -1997 ಕ್ಕೆ ತಿದ್ದುಪಡಿ ತರಲಾಗಿದ್ದು, ಒಂದು ಅಂಕ ಹೆಚ್ಚಾದರೂ ಬದಲಾದ ಅಂಕಗಳನ್ನು ನೀಡುವ ನಿಯಮ ಜಾರಿಗೆ ತರಲಾಗಿದೆ. ಹೊಸ ನಿಯಮದ ಪ್ರಕಾರ 1925 ವಿದ್ಯಾರ್ಥಿಗಳಿಗೆ ಅಂಕಗಳ ಜೊತೆಗೆ ಮರು ಮೌಲ್ಯಮಾಪನದ ಶುಲ್ಕವನ್ನು ಕೂಡ ವಾಪಸ್ ನೀಡಲಾಗುತ್ತದೆ.

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಕ್ಯಾನ್ ಪ್ರತಿ ಪಡೆಯಬೇಕು. ಸ್ಕ್ಯಾನ್ ಪ್ರತಿಪಡೆಯಲು 530 ರೂ., ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು 1670 ರೂ. ಸೇರಿ ಒಟ್ಟು 2200 ರೂ. ಶುಲ್ಕ ಪಾವತಿಸಬೇಕು. ಈ ರೀತಿ 8,950 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಮರು ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದು, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಒಂದು ಅಂಕ ಹೆಚ್ಚು ಬಂದರೂ ಪರಿಗಣಿಸಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. 2023ರ ಮಾರ್ಚ್ ನಲ್ಲಿ ನಡೆದ ವಾರ್ಷಿಕ ಪರೀಕ್ಷೆಯಿಂದ ಹೊಸ ನಿಯಮ ಅನ್ವಯವಾಗಿದೆ.

ಪ್ರತಿಯೊಂದು ಅಂಕವು ಮುಖ್ಯವಾಗಿರುವುದರಿಂದ ಒಂದು ಅಂಕವನ್ನು ಪರಿಗಣಿಸುವ ವಿದ್ಯಾರ್ಥಿ ಸ್ನೇಹಿ ಕೈಗೊಳ್ಳಲಾಗಿದೆ. ಈ ಮೊದಲು ಕನಿಷ್ಠ 6 ಅಂಕಕ್ಕಿಂತ ಹೆಚ್ಚು ಅಂಕ ಬಂದಲ್ಲಿ ಮಾತ್ರ ಬದಲಾದ ಅಂಕಗಳನ್ನು ನೀಡಲಾಗುತ್ತಿತ್ತು. ಸಿಇಟಿ ಸೀಟು ಹಂಚಿಕೆ, ವಿಜ್ಞಾನ ವಿದ್ಯಾರ್ಥಿಗಳಿಗೆ ಒಂದೊಂದು ಅಂಕ ಕೂಡ ಮುಖ್ಯವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.