Wednesday, January 22, 2025
ಸುದ್ದಿ

ಊರ್ವಶಿ ಧರಿಸಿದ್ದ ಮೊಸಳೆ ನೆಕ್ಲೆಸ್ ಬೆಲೆ 270 ಕೋಟಿ ರೂ.ಗಿಂತ ಹೆಚ್ಚು ಅಂತೆ! – ಕಹಳೆ ನ್ಯೂಸ್

76ನೇ ಕಾನ್‌ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ಮುಂದುವರೆದಿದೆ. ಐಶ್ವರ್ಯ ರೈ, ಸಾರಾ ಅಲಿಖಾನ್, ಮಾನುಷಿ ಚಿಲ್ಲಾರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರೆಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಕಮಾಲ್ ಮಾಡಿದ್ದಾರೆ. ಈಗಾಗಲೇ ಐಶ್ ಮುಂಬೈಗೆ ವಾಪಸ್ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಊರ್ವಶಿ ರೌಟೇಲಾ ದಿನಕ್ಕೊಂದು ವೇಷದಲ್ಲಿ ಭಿನ್ನ ವಿಭಿನ್ನ ಲುಕ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ ಉತ್ಸವದಲ್ಲಿ ಮೊದಲ ಬಾರಿಗೆ ಊರ್ವಶಿ ಪಿಂಕ್ ಕಲರ್ ಗೌನ್‌ನಲ್ಲಿ ಮಿಂಚಿದ್ದರು. ಆ ಗೌನ್‌ಗಿಂತ ಗಮನ ಸೆಳೆದಿದ್ದು ಆಕೆಯ ಕುತ್ತಿಗೆಯಲ್ಲಿದ್ದ ಮೊಸಳೆ ವಿನ್ಯಾಸ್ ನೆಕ್ಲೆಸ್ ಹಾಗೂ ಅದೇ ತರಹದ ಕಿವಿಯೋಲೆ. ಸದ್ಯ ರೆಡ್ ಕಾರ್ಪೆಟ್ ಮೇಲೆ ಆಕೆ ಧರಿಸಿದ್ದ ಮೊಸಳೆ ವಿನ್ಯಾಸದ ನೆಕ್ಲೆಸ್ ದರದ ಬಗ್ಗೆ ಈಗ ಬಿಸಿಬಿಸಿ ಚರ್ಚೆ ನಡೀತಿದೆ. ಇದರ ಬೆಲೆ 200 ಕೋಟಿ ರೂ.ಗಿಂತ ಹೆಚ್ಚು ಎನ್ನುವ ವಿಚಾರ ಹಾಟ್ ಟಾಪಿಕ್ ಆಗಿದೆ. ಕೆಲವರಂತೂ ಈ ಸುದ್ದಿ ಕೇಳಿ ಒಂದು ಕ್ಷಣ ಶಾಕ್ ಆಗಿದ್ದಾರೆ.

ದುಬಾರಿ ಕಾಸ್ಟ್ಯೂಮ್, ಆಕ್ಸಸರೀಸ್ ತೊಟ್ಟು ಊರ್ವಶಿ ರೌಟೇಲಾ ರಾಂಪ್ ವಾಕ್ ಮಾಡುತ್ತಿರುತ್ತಾರೆ. ಈ ಹಿಂದೆ ಕೂಡ 40 ಕೋಟಿ ರೂ. ವೆಚ್ಚದ ಕಾಸ್ಟ್ಯೂಮ್‌ನಲ್ಲಿ ಆಕೆ ಹೆಜ್ಜೆ ಹಾಕಿದ್ದಾರೆ ಎನ್ನುವ ವಿಚಾರ ಸುದ್ದಿಯಾಗಿತ್ತು. ಇದೀಗ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ಐರಾವತ’ನ ರಾಣಿಯ ನೆಕ್ಲೆಸ್‌ ಬೆಲೆ ಚರ್ಚೆ ಹುಟ್ಟಾಕ್ಕಿದೆ. ಸ್ವತಃ ಊರ್ವಶಿ ತಂಡವೇ ಈ ಬಗ್ಗೆ ಮಾಹಿತಿ ನೀಡಿದ್ದು ಇದನ್ನು ಒಪ್ಪಲು ಯಾರು ಸಿದ್ಧರಿಲ್ಲ.