Thursday, January 23, 2025
ಸುದ್ದಿ

ಅಭಿಷೇಕ್‌ ಅಂಬರೀಷ್‌ ಮದುವೆ ಡೇಟ್ ಫಿಕ್ಸ್‌; ಆಮಂತ್ರಣ ಪತ್ರಿಕೆ ಫೋಟೊಗಳು ವೈರಲ್ – ಕಹಳೆ ನ್ಯೂಸ್

ರೆಬಲ್‌ಸ್ಟಾರ್‌ ಅಂಬರೀಷ್‌ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್ ಮತ್ತು ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಬಿದ್ದಪ್ಪ ಮದುವೆಯ ದಿನಾಂಕ ಫಿಕ್ಸ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿಯಾಗಿದ್ದರು.ಮೂರ್ನಾಲ್ಕು ವರ್ಷಗಳ ಡೇಟಿಂಗ್ ಬಳಿಕ ಈಗ ಮದುವೆ ನಿಗದಿಯಾಗಿದೆ. ಇತ್ತೀಚೆಗೆ ಇವರ ನಿಶ್ಚಿತಾರ್ಥ ನಡೆದಿತ್ತು. ಜೂನ್ 5 ಹಾಗೂ 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿ- ಅವಿವಾ ಹಸೆಮಣೆ ಏರಲಿದ್ದಾರೆ.

ಜೂನ್ 7ರಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಮಾಹಿತಿ ನೀಡಲಾಗಿದೆ. ಸದ್ಯ ಆಮಂತ್ರಣ ಪತ್ರಿಕೆ ಫೋಟೊಗಳು ವೈರಲ್ ಆಗಿದೆ. ಸ್ಯಾಂಡಲ್‌ವುಡ್ ಜೊತೆ ಪರಭಾಷಾ ಕಲಾವಿದರು, ರಾಜಕೀಯ ಮುಖಂಡರು ಮದುವೆಗೆ ಹಾಜರಾಗಲಿದ್ದಾರೆ.

ಬೆಂಗಳೂರಿನಲ್ಲಿ ಮದುವೆ ನಂತರ ಮಂಡ್ಯದಲ್ಲಿ ಆರತಕ್ಷತೆ ಹಾಗೂ ಬೀಗರ ಊಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಸುಮಾರು 10 ಸಾವಿರ ಜನ ಇದರಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ.