Thursday, January 23, 2025
ಸುದ್ದಿ

ತುಳುನಾಡಿಗೆ ಮಹೇಶ್ ವಿಕ್ರಮ್ ಹೆಗ್ಡೆ; ಕರಾವಳಿಯಿಂದ ಲೋಕಸಭಾ ಚುನಾವಣೆಗೆ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಕಣಕ್ಕಿಳಿಸಿ; ಪೋಸ್ಟರ್ ವೈರಲ್ –ಕಹಳೆ ನ್ಯೂಸ್

ಬಿಜೆಪಿಯ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಲೋಕಸಭೆ ಚುನಾವಣೆಯದ್ದೇ ಸದ್ದು. ಯಾವ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಅನ್ನೋ ಮಾತು ಕರಾವಳಿಗರದ್ದು. ದಿನದಿಂದ ದಿನಕ್ಕೆ ಒಬ್ಬೊಬ್ಬ ವ್ಯಕ್ತಿಯ ಹೆಸರು ಕೇಳಿ ರ‍್ತಾ ಇದ್ದು. ಸದ್ಯ ಎಲ್ಲೆಡೆ ಸದ್ದು ಮಾಡ್ತಾ ಇರೋ ಹೆಸರು ಅಂದ್ರೆ ತುಳುನಾಡಿಗೆ ಮಹೇಶ್ ವಿಕ್ಷಮ್ ಹೆಗ್ಡೆ ಎಂಬ ಪೋಸ್ಟರ್. ಹೌದು ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಹಾಗೂ ಟಿವಿ ವಿಕ್ರಮ ಮುಖ್ಯಸ್ಥನಾಗಿ ಗುರುತಿಸಿಕೊಂಡಿರೋ ಇವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ರೆ ಗೆಲುವು ಖಚಿತ ಎಂಬ ಮಾತುಗಳು ಕೇಳಿ ರ‍್ತಾ ಇದೆ. ಜೊತೆಗೆ ಸಂಘದ ನಿಷ್ಠಾವಂತ ವ್ಯಕ್ತಿಯಾದ ಇವರಿಗೆ ಈ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಲು ಪಕ್ಷ ಮತ್ತು ಹಿರಿಯರು ಅವಕಾಶ ಮಾಡಿಕೊಡಿ ಎಂಬ ಕೂಗು ಕೇಳಿ ರ‍್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಷಿಯಲ್ ಮಿಡಿಯಾದಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಅವರ ಪರವಾಗಿ ಬರಹಗಳ ಪೊಸ್ಟರ್ ಕಾಣ್ತ ಇದೆ. ಇವರು ಸಂಘದ ಹಾಗೂ ಪಕ್ಷದ ಧ್ಯೇಯೋದ್ದೇಶಗಳನ್ನು ಮನ, ಮನೆಗಳಿಗೆ ತಲುಪಿಸಿ, ಪಕ್ಷ ಹಾಗೂ ಸಂಘಟನೆಯನ್ನು ಬಲವರ್ಧನೆಗೊಳಿಸುವಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಲ ಇವರನ್ನು ಮುಂದಿನ ಲೋಕಸಭಾ ಚುನಾವಣಾ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಯಾಗಿ ಬಿಜೆಪಿಯಿಂದ ಆಯ್ಕೆ ಮಾಡುವಂತೆ ತುಳುನಾಡಿಗೆ ಮಹೇಶ್ ವಿಕ್ರಮ್ ಹೆಗ್ಡೆ ಎಂಬ ಬರಹದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು