Thursday, January 23, 2025
ಸುದ್ದಿ

ಜೈಲಿನೊಳಗೆಯೇ “ಡ್ರಗ್ಸ್ ಡಿ-ಎಡಿಕ್ಷನ್ ಸೆಂಟರ್’ ಆರಂಭಿಸಲು ನಿರ್ಧಾರ –ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮಾದಕ ಪದಾರ್ಥಗಳ ನಶೆ ಹೆಚ್ಚಾಗಿದ್ದು ಡ್ರಗ್ಸ್ ಚಟವಿರುವ ಕೈದಿಗಳನ್ನು ನಿಯಂತ್ರಿಸುವುದು, ಡ್ರಗ್ಸ್ ಪೂರೈಕೆ ತಡೆಯುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದಕ್ಕಾಗಿ ಕಾರಾಗೃಹದೊಳಗೆಯೇ “ಡ್ರಗ್ಸ್ ಡಿ-ಎಡಿಕ್ಷನ್ ಸೆಂಟರ್’ ಆರಂಭಿಸಲು ನಿರ್ಧರಿಸಿದ್ದಾರೆ. ಹೌದು, ವಿಚಾರಣಾಧೀನ ಕೈದಿಗಳ ಪೈಕಿ ಡ್ರಗ್ಸ್ ಚಟವುಳ್ಳವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಡ್ರಗ್ಸ್ ಸೇವನೆ, ಮಾರಾಟ, ಸಾಗಾಟ ಮೊದಲಾದ ಪ್ರಕರಣಗಳಲ್ಲಿ ಎನ್‌ಡಿಪಿಎಸ್ ಕಾಯಿದೆಯಡಿ ಬಂಧಿಸಲ್ಪಟ್ಟವರು, ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ಜೊತೆಗೆ ಡ್ರಗ್ಸ್ ಚಟ ಕೂಡ ಹೊಂದಿದವರು ಕಾರಾಗೃಹಕ್ಕೆ ಬಂದಾಗ ಅವರ ವರ್ತನೆ ಅತಿರೇಕದಿಂದ ಕೂಡಿರುತ್ತದೆ.

ಕೆಲವರು ಅನಾರೋಗ್ಯಕ್ಕೂ ತುತ್ತಾಗುತ್ತಿದ್ದು, ಜೈಲಿನೊಳಗಿಂದಲೇ ಡ್ರಗ್ಸ್ ಚಟವುಳ್ಳ ಕೈದಿಗಳು ಹೇಗಾದರೂ ಡ್ರಗ್ಸ್ ಪಡೆಯಬೇಕೆಂದು ನಾನಾ ವಿಧದ ದಾರಿ ಹುಡುಕುತ್ತಿದ್ದಾರೆ. ಅವರ ಬೇಡಿಕೆ ಪೂರೈಸುವುದಕ್ಕಾಗಿ ಸಂಬAಧಿಕರು, ಹಿತೈಷಿಗಳು ಕಾರಾಗೃಹದೊಳಗೆ ಡ್ರಗ್ಸ್ ಪೂರೈಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಕಾರಾಗೃಹದೊಳಗೆ ಡ್ರಗ್ಸ್ ಪೂರೈಕೆಯಾಗದಂತೆ ತಪಾಸಣೆ ನಡೆಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನಲೆ ಶೀಘ್ರದಲ್ಲೇ ಡಿ-ಎಡಿಕ್ಷನ್ ಸೆಂಟರ್ ಪ್ರಾರಂಭಿಸಲು ಪೊಲೀಸ್ ಇಲಾಖೆ ನಿರ್ಧರಿಸಿದ್ದಾರೆ.